ಇಂಡಿಯಾ ಬ್ಯಾಡ್ಮಿಂಟನ್ ಟೂರ್ನಿಗೆ ಕೊರೊನಾ ಗುಮ್ಮ

ನವದೆಹಲಿ,ಜ.13- ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಗೆ ಕೊರೊನಾ ಕಾಡಲಾರಂಭಿಸಿದೆ. ವಿಶ್ವ ಚಾಂಪಿಯನ್‍ಶಿಪ್ ಬೆಳ್ಳಿ ಪದಕ ವಿಜೇತ ಕಿಡಾಂಬಿ ಶ್ರೀಕಾಂತ್ ಸೇರಿದಂತೆ ಏಳು ಭಾರತೀಯ ಷಟ್ಲರ್‍ಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಈ ಆಟಗಾರರ ಹೆಸರುಗಳನ್ನು ಖಚಿತಪಡಿಸುವ ಮುನ್ನ ಬ್ಯಾಡ್ಮಿಂಟನ್ ವಲ್ರ್ಡ್ ಫೆಡರೇಷನ್ (ಬಿಡಬ್ಲ್ಯೂಎಫ್) ಈ ವಿಷಯವನ್ನು ಇಂದು ನಸುಕಿನ ಜಾವ ಪ್ರಕಟಿಸಿದೆ. ಶ್ರೀಕಾಂತ್ ಅವರಲ್ಲದೆ ಸ್ಪರ್ಧೆಯಿಂದ ಹಿಂದೆ ಸರಿದ ಇತರ ಕ್ರೀಡಾಪಟುಗಳೆಂದರೆ ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ […]