ದೇಶದಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ 13 ಸಾವಿರಕ್ಕೆ ಇಳಿಕೆ

ನವದೆಹಲಿ,ಫೆ.22- ದೇಶದಲ್ಲಿ ಕೊರೊನಾ ಪಾಸಿವಿಟಿ ದರ ಶೇ.0.42ಕ್ಕೆ ಇಳಿದಿದೆ. ನಿನ್ನೆ 16 ಸಾವಿರದಷ್ಟಿದ್ದ ಸೋಂಕಿನ ಪ್ರಕರಣಗಳು ಇಂದು 13 ಸಾವಿರಕ್ಕೆ ಇಳಿಕೆಯಾಗುವ ಮೂಲಕ ಸೋಂಕಿನ ಪ್ರಮಾಣ ಗಣನೀಯವಾಗಿ ಕ್ಷೀಣಿಸುತ್ತಿದೆ. ಕಳೆದ 24 ಗಂಟೆಯಲ್ಲಿ ಸೋಂಕಿನಿಂದ 235 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಂದೇ ದಿನದಲ್ಲಿ 34,226 ಜನ ಈ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟಾರೆ 4,21,58,510 ಮಂದಿ ಪೂರ್ಣ ಚೇತರಿಕೆ ಕಂಡಿದ್ದು, ಗುಣಮುಖರಾಗುವವರ ಪ್ರಮಾಣ ಶೇ.98.33ರಷ್ಟಿದೆ.ನಿನ್ನೆ ಮೃತಪಟ್ಟ 235 ಮಂದಿ ಸೇರಿದಂತೆ ಒಟ್ಟಾರೆ ಕೊರೊನಾ […]