ಭಾರತದಲ್ಲಿ 8 ಲಕ್ಷದ ಒಳಗೆ ಕುಸಿದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ
ನವದೆಹಲಿ, ಫೆ.10- ದೇಶದಲ್ಲಿ ದೈನಂದಿನ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವಂತೆಯೇ, ಸಕ್ರಿಯ ಪ್ರಕರಣಗಳು ಕ್ಷೀಣಿಸಿವೆ. ನಿನ್ನೆ 67,084 ಹೊಸ ಪ್ರಕರಣಗಳು ಕಂಡು ಬಂದಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿನ ಸಂಖ್ಯೆ 4,24,78,060 ಏರಿಕೆಯಾಗಿದೆ. ಸಮಾದಾನಕರ ಅಂಶವೆಂದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 7,90,789 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ. ಆದರೆ ಕೋವಿಡ್ ಸಾವಿನ ಸಂಖ್ಯೆಗಳು ಯಥಾರೀತಿ ಮುಂದುವರೆದಿರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ 1,241 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ […]