ಭಾರತದಲ್ಲಿ ಕೊರೋನಾ ಮಹಾಸ್ಪೋಟ : 24 ಗಂಟೆಯಲ್ಲಿ 1,94,720 ಕೇಸ್..!

ನವದೆಹಲಿ, ಜ.12- ದೇಶದಲ್ಲಿ ಏರುತ್ತಲೇ ಇರುವ ಕೊರೊನಾ ಸೋಂಕಿನ ಸಂಖ್ಯೆ 2 ಲಕ್ಷ ಸನಿಹದತ್ತ ಸಾಗಿದ್ದು, ಓಮಿಕ್ರಾನ್ ಪೀಡಿತರ ಸಂಖ್ಯೆ 4868ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,94,720 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, 442 ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವವರಲ್ಲಿ ಶೇ.11.05ರಷ್ಟು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ.ಒಂದೇ ದಿನದಲ್ಲಿ 60,405 ಮಂದಿ ಸೋಂಕಿನಿಂದ ಗುಣಮುಖರಾಗಿರುವುದು ಕೊಂಚ ಸಮಾಧಾನದ ವಿಷಯವಾಗಿದೆ. ಸದ್ಯ ಸಕ್ರಿಯ […]