ಭಾರತದಲ್ಲಿ 33,750 ಮಂದಿಗೆ ಕೋವಿಡ್, ಒಮಿಕ್ರಾನ್ ಸಂಖ್ಯೆ 1,700ಕ್ಕೆ ಏರಿಕೆ

ನವದೆಹಲಿ,ಜ.3- ದೇಶಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 33,750 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. 123 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಒಟ್ಟು 1,45,582 ಸಕ್ರಿಯ ಪ್ರಕರಣಗಳಿದ್ದು, ನಿನ್ನೆ 10,846 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ದೇಶದಲ್ಲಿ 3,42,95,407 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ ಒಂದು ದಿನದಲ್ಲಿ 123 ಜನ ಸೋಂಕಿತರು ಸಾವನ್ನಪ್ಪಿರುವುದು ಸೇರಿದಂತೆ ಈ ಮೂಲಕ ಒಟ್ಟು ದೇಶದಲ್ಲಿ ಸಾವನ್ನಪ್ಪಿರುವವರ […]