24 ಗಂಟೆಯಲ್ಲಿ 71,365 ಜನರಿಗೆ ಕೊರೊನಾ, 1,217 ಸಾವು..!

ನವದೆಹಲಿ, ಫೆ. 9- ಕಳೆದ 24 ತಾಸಿನಲ್ಲಿ ಭಾರತದಲ್ಲಿ 71,365 ಜನರಿಗೆ ಹೊಸ ಕೊರೊನಾ ಸೋಂಕು ತಗುಲಿದೆ. 1,217 ಮಂದಿ ಕೊನೆಯುಸಿರೆಳೆದಿದ್ದಾರೆ.ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದ ಒಟ್ಟು ಸೋಂಕಿತರ  ಸಂಖ್ಯೆ 4,24,10,976 ಕ್ಕೆ ತಲುಪಿದೆ, ಸಾವಿನ  ಸಂಖ್ಯೆ 5,05,279 ಕ್ಕೆ ಏರಿದೆ ಎಂದು ತಿಳಿಸಿದೆ. ಚೇತರಿಕೆ ದರವು ಶೇ 96 ರಷ್ಟಿದೆ ನಿನ್ನೆಯ ವರದಿಗೆ ಹೋಲಿಸಿದರೆ ಸೋಂಕಿತರು ಹಾಗು ಸಾವನ್ನಪಿದವರ ಸಂಖ್ಯೆತುಸು ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣ 1,02,063 ಕ್ಕೆ ದಾಖಲಿಸಲಾಗಿದೆ. […]