ಚುಟುಕು ವಿಶ್ವಕಪ್‍ಗೆ ಭಾರತ ತಂಡ ಪ್ರಕಟ : ಬಿಜಾಪುರದ ರಾಜೇಶ್ವರಿಗೆ ಸ್ಥಾನ

ನವದೆಹಲಿ, ಜ. 6- ಮಹಿಳಾ ಚುಟುಕು ವಿಶ್ವಕಪ್‍ಗೆ ತಂಡವನ್ನು ಪ್ರಕಟಿಸಿದ್ದು ಕರ್ನಾಟಕದ ಬಿಜಾಪುರದ ರಾಜೇಶ್ವರಿ ಗಾಯಕ್‍ವಾಡ್ ಅವರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಳ್ಳಿಗಾಡಿನಿಂದ ಬಂದರೂ ಕೂಡ ಹುಟ್ಟಿನಿಂದಲೂ ಕ್ರಿಕೆಟ್ ಬಗ್ಗೆ ಒಲವು ಮೂಡಿಸಿಕೊಂಡಿದ್ದ ರಾಜೇಶ್ವರಿ ಗಾಯಕ್‍ವಾಡ್ ಅವರನ್ನು ಭಾರತ ತಂಡದಲ್ಲಿ ಆಡುವುದನ್ನು ನೋಡಬೇಕೆಂಬ ಬಯಕೆಯನ್ನು ಅವರ ತಂದೆ ಹೊಂದಿದ್ದರು. ಗಾಯಕ್‍ವಾಡ್ ಶ್ರೀಲಂಕಾ ವಿರುದ್ಧ ನಡೆಯುತ್ತಿದ್ದ ಚುಟುಕು ಸರಣಿಯ ವೇಳೆಯೇ ಅವರ ತಂದೆ ಶಿವಾನಂದ ಗಾಯಕ್‍ವಾಡ್ ಅವರು ಹೃದಯಾಘಾತದಿಂದ ಮೃತರಾದರು. ರೈಲ್ವೇಸ್ ಉದ್ಯೋಗಿ ಯಾಗಿರುವ ಬಲಗೈ ಅರ್ಥೋಡಕ್ ಬೌಲರ್ […]