ರಷ್ಯಾ-ಉಕ್ರೇನ್ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ : ಕಳವಳ ವ್ಯಕ್ತಪಡಿಸಿದ ಭಾರತ

ವಿಶ್ವಸಂಸ್ಥೆ, ಫೆ.22- ರಷ್ಯಾ-ಉಕ್ರೇನ್ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ತೀವ್ರ ಆತಂಕ ವ್ಯಕ್ತಪಡಿಸಿದೆ. ಎಲ್ಲಾ ದೇಶಗಳ ಭದ್ರತಾ ಹಿತಾಸಕ್ತಿಯ ದೃಷ್ಟಿಯಿಂದ ಉದ್ವಿಗ್ನತೆಯ ಶಮನಕ್ಕೆ ಪ್ರಥಮಾದ್ಯತೆ ನೀಡಬೇಕು ಎಂದು ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನಿನ್ನೆ ಉಕ್ರೇನ್‍ನ ಡೊನೆಟ್ಕ್ಸ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್‍ಗಳನ್ನು ಸ್ವತಂತ್ರ ಎಂದು ಗುರುತಿಸುವ ಡಿಕ್ರೀಗಳಿಗೆ ಸಹಿ ಮಾಡಿದರು. ತನ್ಮೂಲಕ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಾಧ್ಯತೆ […]