ಕೃಷಿಯಲ್ಲಿ ಡೀಸೆಲ್ ಬಳಕೆ ಶೂನ್ಯಗೊಳಿಸಲು ಕ್ರಿಯಾ ಯೋಜನೆ ಅಗತ್ಯ
ನವದೆಹಲಿ,ಫೆ.11- ಕೃಷಿಯಲ್ಲಿ ಡೀಸೆಲ್ ಬಳಕೆಯನ್ನು 2020ರ ವೇಳೆಗೆ ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ನವೀಕೃತ ಇಂಧವನ್ನು ಬಳಕೆ ಮಾಡಲು ಕ್ರಿಯಾ ಯೋಜನೆ ರೂಪಿಸುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ. ಎಲ್ಲ ರಾಜ್ಯ ಸರ್ಕಾರಗಳ ಹಾಗೂ ಕೇಂದ್ರಾಡಳಿತ ಪ್ರದಶಗಳ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದಶಿಗಳ ಜೊತೆ ವಚ್ರ್ಯುಲ್ ಸಭೆ ನಡೆಸಿದ ಸಚಿವರು, ಹವಾಮಾನ ಬದಲಾವಣೆಗೆ ಪ್ರಧಾನಿಯವರ ಬದ್ದತೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಒತ್ತು ನೀಡಬೇಕು ಎಂದು ಹೇಳಿದರು. ಇಂಧನ ಕ್ಷೇತ್ರದ ಸುಸ್ಥಿರತೆಗಾಗಿ […]