ಭಾರತದ ಬೌಲಿಂಗ್‍ಗೆ ತಲೆಬಾಗಿದ ಲಂಕಾ, ಫಾಲೋಆನ್ ಏರಿದ ಟೀಂ ಇಂಡಿಯಾ

ಮೊಹಾಲಿ, ಮಾ.6- ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 100ನೆ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯವಾಗಿಸಲು ಮೊಹಾಲಿ ಟೆಸ್ಟ್ ಅನ್ನು ಗೆಲ್ಲಬೇಕೆಂದು ಲೆಕ್ಕಾಚಾರ ಗಳನ್ನು ಹಾಕಿದಂತೆ ಶ್ರೀಲಂಕಾ ತಂಡವನ್ನು ಸೋಲಿನ ದವಡೆಗೆ ದೂಡುವಲ್ಲಿ ರೋಹಿತ್ ಸಾರಥ್ಯದ ಬೌಲರ್‍ಗಳು ಯಶಸ್ವಿಯಾಗಿದ್ದಾರೆ. ಮೊದಲ ಇನ್ನಿಂಗ್ಸ್‍ನಲ್ಲಿ 174 ರನ್‍ಗಳಿಗೆ ಅಲೌಟ್ ಆಗುವ ಮೂಲಕ 400 ರನ್‍ಗಳ ಹಿನ್ನೆಡೆ ಅನುಭವಿಸಿದ್ದ ಲಂಕಾ ಬ್ಯಾಟ್ಸ್‍ಮನ್‍ಗಳು ದ್ವಿತೀಯ ಇನ್ನಿಂಗ್ಸ್‍ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ದ್ವಿತೀಯ ಇನ್ನಿಂಗ್ಸ್‍ನಲ್ಲಿ ಬ್ಯಾಟಿಂಗ್ ಆರಂಭಿಸಿದ ಲಂಕಾದ ಆರಂಭಿಕ ಆಟಗಾರರಾದ ಲಿಹಿರಿ ತಿರುಮನೆಯವರು […]