ಪರ್ವತಗಳ ಸಾಲಿನಲ್ಲಿ ಸಿಲುಕಿದ್ದ ಯುವಕನ ರಕ್ಷಣೆ
ಪಾಲಕ್ಕಾಡ್, ಫೆ.9- ಟ್ರಕ್ಕಿಂಗ್‍ಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಪರ್ವತಗಳ ಸಾಲಿನಲ್ಲಿ ಸಿಲುಕಿದ್ದ ಯುವಕನ್ನು ಬೆಂಗಳೂರನಿಂದ ಆಗಮಿಸಿ ಸೇನಾ ತಂಡ ರಕ್ಷಣೆ ಮಾಡಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಪುಳ ಪ್ರದೇಶದ ಪರ್ವತದ ಸೀಳುಗಳಲ್ಲಿ ಎರಡು ದಿನಗಳಿಂದ ಆಹಾರ, ನೀರು ಇಲ್ಲದೆ ಬಾಬು ಎಂಬ ಯುವಕ ಸಿಲುಕಿದ್ದ. ಸ್ಥಳೀಯರ ಪ್ರಕಾರ ಬಾಬು ಮೂವರು ಸ್ನೇಹಿತರೊಂದಿಗೆ ಕಡಿದಾದ ಬೆಟ್ಟವನ್ನು ಹತ್ತಲು ನಿರ್ಧರಿಸಿದ್ದರು. ಇಬ್ಬರು ಸ್ನೇಹಿತರು ಅರ್ಧಕ್ಕೆ ಬಿಟ್ಟು ವಾಪಾಸ್ ಬಂದಿದ್ದಾರೆ. ಬಾಬು ಹಠ ಬಿಡದೆ ಬೆಟ್ಟ ಹತ್ತಿದ್ದಾನೆ. ಪರ್ವತದ […]