ಉಕ್ರೇನ್‍ನಲ್ಲಿ ಪಾಕಿಸ್ತಾನಿಯರಿಗೂ ನೆರವಾದ ತ್ರಿವರ್ಣ ಧ್ವಜ

ಕ್ಯಿವ್,ಮಾ.2- ಭಾರತದ ತ್ರಿವರ್ಣ ಧ್ವಜ ಭಾರತೀಯರಿಗಷ್ಟೇ ಅಲ್ಲ ಪಾಕಿಸ್ತಾನ ಹಾಗೂ ತುರ್ಕೀಸ್ ವಿದ್ಯಾರ್ಥಿಗಳ ಜೀವಕ್ಕೂ ರಕ್ಷಣೆ ನೀಡಿದ್ದು, ಅಂತಿಮವಾಗಿ ಅಪಾಯದಿಂದ ಪಾರಾದ ಪಾಕಿಸ್ತಾನದ ವಿದ್ಯಾರ್ಥಿಗಳು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದಾರೆ. ಯುದ್ಧಕಾಲದಲ್ಲಷ್ಟೇ ಶಾಂತಿಯ ಬೆಲೆ ತಿಳಿಯುತ್ತದೆ ಎಂಬ ನಾಣ್ಣುಡಿಯಂತೆ ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿಸಲಾಗಿರುವ ಪಾಕಿಸ್ತಾನ ಮತ್ತು ಭಾರತದ ವಿದ್ಯಾರ್ಥಿಗಳ ಜೀವ ರಕ್ಷಣೆಗೆ ತ್ರಿವರ್ಣ ಧ್ವಜವೇ ಆಸರೆಯಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ವಿದ್ಯಾರ್ಥಿಗಳು ಕ್ಯಿವ್‍ನಿಂದ ಗಡಿ ಭಾಗದ ದೇಶಗಳಿಗೆ ತ್ರಿವರ್ಣ ರಾಷ್ಟ್ರಧ್ವಜವನ್ನು ಬಳಸಿ ಆಗಮಿಸುವಂತೆ ರಾಯಭಾರ […]