ಉಕ್ರೇನ್‌ ರಾಜಧಾನಿ ಕ್ಯಿವ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗೆ ಗುಂಡೇಟು

ರ್ಜೆಸ್ಜೋವ್(ಪೊಲೆಂಡ್), ಮಾ.4- ಯುದ್ಧ ಪೀಡಿತ ಉಕ್ರೇನ್ ರಾಜಧಾನಿ ಕ್ಯಿವ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬರಿಗೆ ಗುಂಡೇಟು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಭಾರತ ಸರ್ಕಾರದ ವಿಮಾನಯಾನ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್ ಹೇಳಿದ್ದಾರೆ. ಪೊಲೆಂಡ್‍ನ ವಿಮಾನ ನಿಲ್ದಾಣದಲ್ಲಿ ಎಎನ್‍ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಭಾರತೀಯ ಮೂಲದ ವಿದ್ಯಾರ್ಥಿ ಪೊಲೆಂಡ್ ಗಡಿಯತ್ತ ಪ್ರಯಾಣ ಮಾಡುತ್ತಿರುವಾಗ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ವಾಪಾಸ್ ಕ್ಯಿವ್‍ಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. # ವಿದ್ಯಾರ್ಥಿಗಳ ಪರದಾಟ: ಸಂಘರ್ಷ ಪೀಡಿತ ಪ್ರದೇಶದಲ್ಲಿ […]