ಭಾರತೀಯ ವಿದ್ಯಾರ್ಥಿಗಳನ್ನು ಮಾನವ ಕವಚಗಳಂತೆ ಬಳಸುತ್ತಿರುವ ಉಕ್ರೇನ್

ನವದೆಹಲಿ,ಮಾ.3- ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳು ಪ್ರಾಣಾಪಾಯ ಎದುರಿಸುತ್ತಿದ್ದು, ಸ್ಥಳೀಯರು ದೌರ್ಜನ್ಯವೆಸಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಸುಮಾರು 20 ಸಾವಿರ ವಿದ್ಯಾರ್ಥಿಗಳು ಹಾಗೂ ನಾಗರಿಕರು ಉಕ್ರೇನ್‍ನಲ್ಲಿ ವಿದ್ಯಾಭ್ಯಾಸ ಹಾಗೂ ವ್ಯಾಪಾರ ಇತರ ಕಾರಣಗಳಿಂದಾಗಿ ನೆಲೆಸಿದ್ದರು. ಯುದ್ಧ ಶುರುವಾದ ಬಳಿಕ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯಗಳು ನೀಡಿದ ಸೂಚನೆ ಆಧರಿಸಿ ಸುಮಾರು 17 ಸಾವಿರ ಮಂದಿ ಉಕ್ರೇನ್ ತೊರೆದು ನೆರೆಯ ರಾಷ್ಟ್ರಗಳಿಗೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಬಾಕಿ ಉಳಿದ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಉಕ್ರೇನ್ ಬಿಟ್ಟು […]