ಅಮೆರಿಕದಲ್ಲಿ ಭಾರತೀಯರನ್ನು ಒಗ್ಗೂಡಿಸಿದ್ದ ಕನ್ನಡಿಗ ಹನುಮಂತಯ್ಯ ಮರೂರು ವಿಧಿವಶ

ಬೆಂಗಳೂರು ನ.12- ಅಮೆರಿಕಾದಲ್ಲಿ ಭಾರತೀಯರನ್ನು ಒಗ್ಗೂಡಿಸುವಲ್ಲಿ ಮತ್ತು ಸನಾತನ ಸಂಸ್ಕøತಿಯನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹನುಮಂತಯ್ಯ ಮರೂರು (82) ನಿನ್ನೆ ಸಂಜೆ ಮಿಂಚಿಂಗನ್‍ನಲ್ಲಿ ನಿಧನರಾಗಿದ್ದಾರೆ. ಕಳೆದ ಹತ್ತು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಅಮೆರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮರೂರು ಗ್ರಾಮದವರಾದ ಹನುಮಂತಯ್ಯ ಎಂಜಿನಿಯರ್ ಪದವೀಧರರಾಗಿದ್ದು, 70ರ ದಶಕದಲ್ಲಿ ಅಮೆರಿಕಾಗೆ ತೆರಳಿದ್ದರು. ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಗಳಿಸಿದ ಅವರು, ಅಮೆರಿಕಾದ ಮಿಂಚಿಂಗನ್‍ನ ಪ್ಲಿಂಟ್‍ನಲ್ಲಿ […]