ಈ ಬಾರಿ ಏರ್ ಷೋದ ಪ್ರಮುಖ ಆಕರ್ಷಣೆಯಾಗಲಿದೆ ತೇಜಸ್

ಬೆಂಗಳೂರು,ಫೆ.1- ಭಾರತೀಯ ಯುದ್ಧ ವಿಮಾನ ಪೂರ್ಣ ಪ್ರಮಾಣದ ಎಲ್ಸಿಎ-ತೇಜಸ್ ಅಂತಿಮ ಕಾರ್ಯಾಚರಣೆ ಅನುಮತಿ ಪಡೆದಿದ್ದು, ಏರೋ ಇಂಡಿಯಾದ ಪ್ರಮುಖ ಆಕರ್ಷಣೆಯಾಗಲಿದೆ. ಜೊತೆಗೆ ವಾಯು ಸೇನೆಗೆ ಸೇರ್ಪಡೆಗೊಳ್ಳಲು ಎಲ್ಲಾ ತಯಾರಿಗಳು ನಡೆದಿವೆ. ಬೆಂಗಳೂರಿನಲ್ಲಿ ಫೆ.13ರಿಂದ 17ರ ನಡುವೆ ನಡೆಯುವ 14 ಆವೃತ್ತಿಯ ಏರೋ ಇಂಡಿಯಾದಲ್ಲಿ ಭಾರತೀಯ ಪೆವಿಲಿಯನ್ ಕೇಂದ್ರೀತ ಸ್ಥಾನ ಪಡೆಯಲಿದೆ. ಪೆವಿಲಿಯನ್ನಲ್ಲಿ ಭವಿಷ್ಯದ ನಿರೀಕ್ಷೆಗಳನ್ನು ಒಳಗೊಂಡಂತೆ ನಿರ್ದಿಷ್ಟ ವಲಯದಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ. ಖಾಸಗಿ ಪಾಲುದಾರರು ಉತ್ಪಾದಿಸುತ್ತಿರುವ ಎಲ್ಸಿಎ-ತೇಜಸ್ ವಿಮಾನದ ವಿವಿಧ ರಚನಾತ್ಮಕ ಮಾದರಿಗಳು, […]