ಇಂಡೋನೇಷ್ಯಾದ ಮೌಂಟ್ ಸೆಮೆರು ಜ್ವಾಲಾಮುಖಿ ಸ್ಫೋಟದಿಂದ ಆಪಾರ ಹಾನಿ

ಸುಂಬರ್ವುಲುಹ್ (ಇಂಡೋನೇಷ್ಯಾ), ಡಿ.5 – ಪೂರ್ವ ಜಾವಾ ಪ್ರಾಂತ್ಯದ ಲುಮಾಜಾಂಗ್ ಜಿಲ್ಲೆಯ ಮೌಂಟ್ ಸೆಮೆರು ಜ್ವಾಲಾಮುಖಿ ತೀವ್ರಗೊಂಡಿದ್ದು ಸುಮಾರು 5,000 ಅಡಿ ಎತ್ತರಕ್ಕೆ ಬೂದಿಯನ್ನು ಆಕಾಶಕ್ಕೆ ಉಗುಳುತ್ತಿರುವ ಕಾರಣ ಸಮೀಪದ ಹಳ್ಳಿಗಳು ಮತ್ತು ಹತ್ತಿರದ ಪಟ್ಟಣಗಳು ಮುಚ್ಚಿಹೋಗಿವೆ, ಆದರೆ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಇಂದು ನೂರಾರು ರಕ್ಷಕರ ಪಡೆ ಸುಂಬರ್ವುಲುಹ್ ಮತ್ತು ಸುಪಿತುರಾಂಗ್ ಗ್ರಾಮಗಳಲ್ಲಿ ಮನೆಗಳ ಮೇಲೆ ಟನ್‍ಗಟ್ಟಲೆ ಜ್ವಾಲಾಮುಖಿಯ ಅವಶೇಷಗಳು ಬಿದ್ದು ಮುಚ್ಚಿಹೋಗಿದೆ ಇಲ್ಲಿ ಬದುಕಿರುವವರಿಗಾಗಿ ಹುಡುಕಾಟ ನಡೆದಿದೆ. ಭಾರೀ ಮಳೆ ಸುರಿದ ಕಾರಣ ಜ್ವಾಲಾಮುಖಿಯ […]