ಮತ್ತೊಮ್ಮೆ ಕೇಂದ್ರ ಸರ್ಕಾರದ ಟ್ವಿಟರ್ ಖಾತೆ ಹ್ಯಾಕ್

ನವದೆಹಲಿ, ಜ.12- ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರಾಂಗ ಇಲಾಖೆಯ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ನುಸುಳುಕೋರರು ಇಲಾಖೆಯ ಖಾತೆಯ ಹೆಸರನ್ನು ಎಲೋನ್ ಮುಸ್ಕ್ ಎಂದು ಬದಲಾವಣೆ ಮಾಡಿ, ಗ್ರೆಟ್ ಜಾಬ್ ಎಂದು ಟ್ವಿಟ್ ಮಾಡಿದ್ದಾರೆ. ಈ ಮೂಲಕ ಡಿಜಿಟಲ್ ಇಂಡಿಯಾಗೆ ಸವಾಲು ಎದುರಾಗಿದೆ. ಕೆಲವೇ ಸಮಯದಲ್ಲಿ ಮಾಹಿತಿ ಮತ್ತು ಪ್ರಸಾರಾಂಗ ಇಲಾಖೆ ಖಾತೆಯನ್ನು ಮರುಗಳಿಕೆ ಮಾಡಿಕೊಂಡಿದ್ದು, ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಪ್ರೋಪೈಲ್ ಚಿತ್ರ ಮತ್ತು ಹ್ಯಾಕರ್ ಪೋಸ್ಟ್ ಮಾಡಿದ ಕೆಲವು ಲಿಂಕ್‍ಗಳನ್ನು ಖಾತೆಯಲ್ಲಿ ಡಿಲಿಟ್ ಮಾಡಲಾಗಿದೆ. […]