20 ವರ್ಷದಿಂದ ಮನೆಯಲ್ಲೇ ಬಂಧಿಯಾಗಿದ್ದ ಅಣ್ಣ-ತಂಗಿಯ ರಕ್ಷಣೆ

ಬೆಂಗಳೂರು, ಮಾ.19- ಕಳೆದ 20 ವರ್ಷಗಳಿಂದ ಹರಿಯಾಣದ ಅಂಬಾಲಾ ಕ್ಯಾಂಟ್‍ನ ಬೋಹ್ ಗ್ರಾಮದಲ್ಲಿ ಮನೆಯೊಂದರಲ್ಲಿ ಬಂಧಿಯಾಗಿದ್ದ ಅಣ್ಣ-ತಂಗಿಯನ್ನು ರಕ್ಷಿಸಲಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ತಂದೆ-ತಾಯಿಯ ನಿಧನದ ನಂತರ ಸಿಂಧು ಮತ್ತು ಸುನೀಲ್ ತಮ್ಮ ಸ್ವಂತ ಮನೆಗೆ ಬೀಗ ಹಾಕಿಕೊಂಡಿದ್ದರು. ವರದಿಯ ಪ್ರಕಾರ, ರಕ್ಷಿಸಲ್ಪಟ್ಟ ಒಡಹುಟ್ಟಿದವರ ತಂದೆ ಸೂರ್ಯ ಪ್ರಕಾಶ್ ಶರ್ಮಾ ಅವರು ಆಯುರ್ವೇದ ವೈದ್ಯರಾಗಿದ್ದರು. ಸಿಂಧು ಮತ್ತು ಸುನೀಲ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸಿಂಧು ಅವರು ಮಾಸ್ಟರ್ ಆಫ್ ಆಟ್ರ್ಸ್ ಮತ್ತು ಬ್ಯಾಚುಲರ್ ಆಫ್ ಎಜುಕೇಶನ್ […]

ಡೈಪರ್‌ನಲ್ಲಿ ಅಡಗಿಸಿಟ್ಟು ಚಿನ್ನ ಕಳ್ಳ ಸಾಗಾಣಿಕೆ

ಮಂಗಳೂರು,ಮಾ.18- ವಿದೇಶದಿಂದ ಚಿನ್ನವನ್ನು ಕಳ್ಳ ಸಾಗಾಣಿಕೆ ಮೂಲಕ ತರಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇವೆ. ಸುಮಾರು ಎರಡು ವರ್ಷದ ಮಗುವಿನ ಡೈಪರ್‌ನಲ್ಲಿ ಹಳದಿ ಲೋಹವನ್ನು ಅಡಗಿಸಿಟ್ಟು ಸಾಗಾಣಿಕೆ ಮಾಡುವಾಗ ವ್ಯಕ್ತಿಯೊಬ್ಬರು ಸಿಕ್ಕಿ ಬಿದಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿಳಿದ ಪುರುಷ ಪ್ರಯಾಣಿಕನೊಬ್ಬ ತನ್ನ 21 ತಿಂಗಳ ಮಗಳ ಡೈಪರ್‌ನಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ದ್ರಾವಕ ರೂಪದಲ್ಲಿದ್ದ ಚಿನ್ನವನ್ನು ಡೈಪರ್‍ನ ಮಡಿಕೆಗಳಲ್ಲಿ ಅಡಗಿಸಿಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ […]

ದೇವಸ್ಥಾನದಲ್ಲೇ ಅರ್ಚಕನ ಕೊಲೆ

ಸಂಭಾಲ್, ಮಾ.15- ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ದೇವಸ್ಥಾನದ ಆವರಣದ ಕೊಠಡಿಯಲ್ಲಿ 55 ವರ್ಷದ ಅರ್ಚಕನ ಶವ ಪತ್ತೆಯಾಗಿದ್ದು, ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಚಾಂದೌಸಿ ಕೊಟ್ವಾಲಿ ಪ್ರದೇಶದಲ್ಲಿರುವ ಶಿವ ದೇವಾಲಯದ ಅರ್ಚಕ ರೋಷನ್ ಲಾಲ್ ಸೈನಿ (55) ಅವರ ಮೃತದೇಹ ಕೊಠಡಿಯಲ್ಲಿ ಪತ್ತೆಯಾಗಿದೆ ಎಂದು ಎಸ್ಪಿ ಚಕ್ರೇಶಶ್ ಮಿಶ್ರಾ ತಿಳಿಸಿದ್ದಾರೆ. ತಲೆಯ ಮೇಲೆ ಭಾರೀ ಕಲ್ಲಿ ಎತ್ತಿ ಹಾಕಿ ಕೊಲೆ ಮಾಡಿರುವ ಕುರುಹುಗಳಿವೆ ಎಂದಿರುವ ಅವರು, ಶ್ವಾನದಳ ಹಾಗೂ ಕಣ್ಗಾವಲು ತಂಡ ಸ್ಥಳಕ್ಕೆ ಧಾವಿಸಿ ತನಿಖೆ […]

ತಾಯಿ ಗರ್ಭದಲ್ಲೇ ಹಸುಗೂಸಿನ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿ

ನವದೆಹಲಿ,ಮಾ.15- ತಾಯಿ ಗರ್ಭದಲ್ಲಿರುವ ಹಸುಗೂಸಿನ ಹೃದಯ ಶಸ್ತ್ರಚಿಕಿತ್ಸೆ ನೀಡುವಲ್ಲಿ ದಹೆಲಿ ಏಮ್ಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ತಾಯಿಯ ಗರ್ಭದಲ್ಲಿರುವ ದ್ರಾಕ್ಷಿ ಗಾತ್ರದ ಮಗುವಿನ ಹೃದಯದಲ್ಲಿ ಕಾಣಿಸಿಕೊಂಡಿದ್ದ ಕವಾಟದ ಬಲೂನ್ ತೊಂದರೆಯನ್ನು ನಿವಾರಿಸುವಲ್ಲಿ ದೆಹಲಿಯ ಏಮ್ಸ್ ಯಶಸ್ವಿಯಾಗಿದೆ. ಮೂರು ಬಾರಿ ಗರ್ಭ ನಷ್ಟವಾಗಿದ್ದ 28 ವರ್ಷದ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗುವಿನ ಹೃದಯದ ಸ್ಥಿತಿಯ ಬಗ್ಗೆ ಸಂವಹನ ನಡೆಸಿದ ನಂತರ ಮತ್ತು ಫಲಿತಾಂಶವನ್ನು ಸುಧಾರಿಸುವ ಇಚ್ಛೆಯೊಂದಿಗೆ ಕಾರ್ಯವಿಧಾನಕ್ಕೆ ಒಪ್ಪಿಗೆ ನೀಡಿದ ನಂತರ ಪೋಷಕರು ಪ್ರಸ್ತುತ ಗರ್ಭಧಾರಣೆಯನ್ನು ಮುಂದುವರಿಸಲು […]

ಆನ್‍ಲೈನ್ ಆರ್ಡರ್‌ನಲ್ಲಿ ಬಂದ ಬ್ರೆಡ್‍ನಲ್ಲಿತ್ತು ಇಲಿಮರಿ

ನವದೆಹಲಿ,ಫೆ.11- ಸ್ವಿಗ್ಗಿ, ಬಿಗ್‍ಬಾಸ್ಕೆಟ್ ಮತ್ತಿತರ ತ್ವರಿತ ಆನ್‍ಲೈನ್ ಡೆಲಿವರಿ ಆಪ್‍ಗಳಿಂದ ತಿಂಡಿ, ತಿನಿಸು, ದಿನಸಿ ಮತ್ತಿತರ ವಸ್ತುಗಳನ್ನು ತರಿಸುವ ಗ್ರಾಹಕರೇ ಇನ್ನು ಮುಂದೆ ಹುಷಾರಾಗಿರಿ ಏಕೆಂದರೆ ನೀವು ಆರ್ಡರ್ ಮಾಡುವ ತಿಂಡಿ ತಿನಿಸಿನೊಂದಿಗೆ ಇಲಿ ಬಂದರೂ ಅಚ್ಚರಿಪಡುವಂತಿಲ್ಲ! ಹೇಗೆ ಅಂತೀರಾ ಈ ಸುದ್ದಿ ಓದಿ ನೋಡಿ… ನಿತಿನ್ ಅರೋರಾ ಎಂಬ ವ್ಯಕ್ತಿಯೊಬ್ಬರು ಬ್ಲಿಂಕಿಟ್ ಆಪ್ ಮೂಲಕ ಆರ್ಡರ್ ಮಾಡಿದ್ದ ಬ್ರೆಡ್ ಪ್ಯಾಕೆಟ್‍ನಲ್ಲಿ ಜೀವಂತ ಇಲಿಯೊಂದು ಪ್ರತ್ಯಕ್ಷವಾಗಿದೆ. ತಾವು ತರಿಸಿದ್ದ ಬ್ರೆಡ್ ಪ್ಯಾಕೆಟ್‍ನಲ್ಲಿ ಜೀವಂತ ಇಲಿ ಓಡಾಡಿಕೊಂಡಿರುವ ದೃಶ್ಯವನ್ನು […]