ಅಮೆರಿಕ ವಿದೇಶಾಂಗ ಇಲಾಖೆ ಹಂಗಾಮಿ ವಕ್ತಾರರಾದ ಪಟೇಲ್

ವಾಷಿಂಗ್ಟನ್, ಮಾ.10- ಭಾರತೀಯ ಮೂಲದ ವೇದಾಂತ್ ಪಟೇಲ್ ಅವರು ಅಮೆರಿಕ ವಿದೇಶಾಂಗ ಇಲಾಖೆಯ ಹಂಗಾಮಿ ವಕ್ತಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹಾಲಿ ವಕ್ತಾರರಾಗಿರುವ ನೆಡ್ ಪ್ರೈಸ್ ಅವರು ಈ ತಿಂಗಳು ನಿವೃತ್ತರಾಗಲಿದ್ದು, ಅವರ ಸ್ಥಾನದಲ್ಲಿ ಭಾರತೀಯ ಮೂಲದ ಅಮೆರಿಕನ್ ಪಟೇಲ್ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕ ವಿದೇಶಾಂಗ ಇಲಾಖೆ ಹಂಗಾಮಿ ವಕ್ತಾರರಾಗಿ ಪಟೇಲ್ ಅವರು ಮುಂದುವರೆಯಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಪ್ರಕಟಿಸಿದ್ದಾರೆ. 2021ರಿಂದ ನೆಡ್ ಪ್ರೈಸ್ ಅವರು ಯುಎಸ್ ಡಿಪಾಟ್ರ್ಮೆಂಟ್ ಆಫ್ ಸ್ಟೇಟ್ ವಕ್ತಾರರಾಗಿ ಕೆಲಸ […]
ಜಾಮೀನು ಸಿಕ್ಕ ಬೆನ್ನಲ್ಲೇ ಮಾಡಾಳ್ ಪ್ರತ್ಯಕ್ಷ, ಅಭಿಮಾನಿಗಳಿದ ಹೂಹಾರ, ಜೈಕಾರ

ಚನ್ನಗಿರಿ,ಮಾ.7- ನಾನು ಯಾವುದೇ ಅಕ್ರಮ ಹಣ ಸಂಪಾದಿಸಿಲ್ಲ. ನನ್ನ ಮನೆಯಲ್ಲಿ ಸಿಕ್ಕ ಹಣ ಕ್ರಷರ್ ಉದ್ಯಮದಿಂದ ಹಾಗೂ ಅಡಿಕೆ ಮಾರಿ ಬಂದ ಆದಾಯವಾಗಿದ್ದು, ಅದಕ್ಕೆ ಸೂಕ್ತ ದಾಖಲೆ ಇದೆ. ಅದನ್ನು ಸಲ್ಲಿಸುತ್ತೇನೆ. ಲಂಚ ಪ್ರಕರಣದಲ್ಲಿ ನಾನು ಸಂಪೂರ್ಣ ನಿರ್ದೋಷಿ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪುತ್ರ ಪ್ರಶಾಂತ್ ಮಾಡಾಳ್ ಅವರ ಕಚೇರಿ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಸುಮಾರು 2 ಕೋಟಿ ಹಣ ವಶಪಡಿಸಿಕೊಂಡಿದ್ದರು. ಇದೇ ವೇಳೆ ಸದಾಶಿವನಗರದಲ್ಲಿರುವ ಅವರ ನಿವಾಸದ […]