ಆನಂದರಾವ್ ವೃತ್ತದ ಬಳಿ ಬೃಹತ್ ಅವಳಿ ಗೋಪುರ ನಿರ್ಮಾಣ

ಬೆಂಗಳೂರು,ನ.19- ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ 25 ಮಹಡಿಗಳ ಅವಳಿ ಗೋಪುರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ವಿಕಾಸ ಸೌಧದ ಪಕ್ಕದಲ್ಲಿರುವ ಬಹುಮಹಡಿ ಕಟ್ಟಡ, ಶಾಂತಿನಗರದ ಬಿಎಂಟಿಸಿ ಟರ್ಮಿನಸ್, ಕೋರಮಂಗಲದ ಕೇಂದ್ರೀಯ ಸದನ್, ವಿವಿ ಟವರ್ಸ್, ಆನಂದ್ ರಾವ್ ಸರ್ಕಲ್ ಫ್ಲೈಓವರ್ ಬಳಿ ಸೇರಿದಂತೆ ವಿವಿಧೆಡೆ ಸರ್ಕಾರಿ ಕಚೇರಿಗಳಿವೆ. ಈ ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸ್ಥಳದಲ್ಲಿ ತರಲು 2020 ರಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವಳಿ ಗೋಪುರ ಪ್ರಸ್ತಾವನೆ ತರಲಾಗಿತ್ತು. […]