ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಆರಂಭ ; ಸ್ಟಾರ್ ಆಟಗಾರರಿಗೆ ಶಾಕ್

ಬೆಂಗಳೂರು, ಫೆ. 10- ಐಪಿಎಲ್ ಮೆಗಾಹರಾಜಿಗೆ ದಿನಗಣನೆ ಶುರುವಾಗಿದ್ದು ಫೆ. 12 ಮತ್ತು 13 ರಂದು ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ. ಈಗಾಗಲೇ ತಂಡಗಳ ಫ್ರಾಂಚೈಸಿಗಳು ಸಿಲಿಕಾನ್ ಸಿಟಿಗೆ ತಲುಪಿದ್ದು ತಮ್ಮ ತಂಡಕ್ಕೆ ಯಾವ ಯಾವ ಆಟಗಾರರನ್ನು ತೆಗೆದುಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಐಪಿಎಲ್‍ನ ಬಿಡ್‍ನಿಂದ ಸ್ಟಾರ್ ಆಟಗಾರರಾದ ಕ್ರಿಸ್‍ಗೇಲ್, ಮಿಚೆಲ್ ಸ್ಟ್ರಾಕ್, ಕೇಲ್ ಜೆಮ್ಮಿಸನ್, ಬೆನ್ ಸ್ಟ್ರೋಕ್ ಅವರು ಹೊರಗುಳಿದಿದ್ದರೆ, ಇನ್ನು ಬಿಡ್ ಅಖಾಡದಲ್ಲಿರುವ ಕೆಲವು ಸ್ಟಾರ್ ಆಟಗಾರರನ್ನು ಬಿಕರಿ ಮಾಡದೆ ಇರಲು ಕೂಡ ಫ್ರಾಂಚೈಸಿಗಳು ನಿರ್ಧರಿಸಿದ್ದರೆ. […]