ಐರನ್ ಬಾಕ್ಸ್ ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3 ಕೆಜಿ ಚಿನ್ನ ವಶ

ಬೆಂಗಳೂರು,ಡಿ.3- ಕಳೆದ ತಿಂಗಳು ನಡೆದ ಕಾರ್ಯಾ ಚರಣೆಯಲ್ಲಿ ವಿದೇಶದಿಂದ ವಿವಿಧ ಸ್ವರೂಪದಲ್ಲಿ ಕಳ್ಳ ಸಾಗಾಣಿಕೆ ಮೂಲಕ ತರಲಾಗಿದ್ದ ಏಳು ಕೆಜಿಗೂ ಅಧಿಕ ತೂಕದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿ ಕೊಳ್ಳಲಾಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಐರನ್ ಬಾಕ್ಸ್‍ನಲ್ಲಿ ಅಡಗಿಸಿಟ್ಟು ತರುತ್ತಿದ್ದ ಒಂದುವರೆ ಕೋಟಿ ರೂಪಾಯಿಗೆ ಹೆಚ್ಚಿನ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ದುಬೈನಿಂದ ನವೆಂಬರ್ 29ರಂದು ಮುಂಜಾನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಕೆ 568 ಸಂಖ್ಯೆಯ ವಿಮಾನದಲ್ಲಿ ಪ್ರಯಾಣಿಕರನ್ನು […]