BIG NEWS : ನಿಮ್ಮ ಖುಷಿ ತುಂಬಾ ದಿನ ಇರಲ್ಲ : ADGP ಅಲೋಕ್ ಕುಮಾರ್‌ಗೆ ಜೀವ ಬೆದರಿಕೆ

ಬೆಂಗಳೂರು,ನ.24-ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ತಿರುವು ದೊರೆತಿದ್ದು, ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಘಟನೆಯ ಹೊಣೆ ಹೊತ್ತುಕೊಂಡಿದೆ. ಜತೆಗೆ ಎಡಿಜಿಪಿ ಅಲೋಕ್‍ಕುಮಾರ್‍ಗೂ ಬೆದರಿಕೆ ಹಾಕಲಾಗಿದೆ. ಅನಾಮದೇಯ ಮೂಲಗಳಿಂದ ಬಂದಿರುವ ಪತ್ರಿಕಾ ಹೇಳಿಕೆಯ ತಲೆಬರಹ ಅರೆಬಿಕ್ ಭಾಷೆಯಲ್ಲಿದೆ. ಮಜಿಲ್ ಅಲ್ ಮುಕ್ವಾವಹಮ್ಮದ್ ಅಲ್-ಇಸ್ಲಾಮಿಯಾ ಎಂದು ಬರೆಯಲಾಗಿದ್ದು, ಕೆಳಗೆ ಶಂಕಿತ ಉಗ್ರ ಶಾರಿಕ್‍ನ ಎರಡು ಫೋಟೋಗಳನ್ನು ಪ್ರಕಟಿಸಲಾಗಿದೆ. ಒಂದು ಫೋಟೋ ಆತ ಸೋಟಕ್ಕೂ ಮುನ್ನ ಸ್ಟೈಲೀಶ್‍ಆಗಿ ಫೋಸ್‍ಕೊಟ್ಟಿರುವುದು, ಮತ್ತೊಂದು ಸ್ಪೋಟದ ಬಳಿಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. […]
ಅಯೋಧ್ಯೆಯ ಮಸೀದಿ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ
ಲಖ್ನೋ,ಆ.21- ರಾಮಜನ್ಮಭೂಮಿ ಅಯೋಧ್ಯೆಯ ಧನೀಪುರದಲ್ಲಿ ಮಸೀದಿ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲಾಗಿದೆ ಎಂದು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್(ಐಐಸಿಎಫ್) ತಿಳಿಸಿದೆ. 2019ರ ನವೆಂಬರ್ 9ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ದಶಕಗಳ ಅಯೋಧ್ಯಾ ರಾಮಜನ್ಮ ವಿವಾದವನ್ನು ಇತ್ಯಥರ್ಗೊಳಿಸಿದೆ. ತೀರ್ಪಿನ ಭಾಗವಾಗಿ ದನ್ನಿಪುರದಲ್ಲಿ ಐದು ಎಕರೆ ಜಾಗ ನೀಡಲಾಗಿದೆ. ಅದರಲ್ಲಿ ಮೊದಲು ಆಸ್ಪತ್ರೆ ನಿರ್ಮಿಸಲಾಗಿದ್ದು, ಹೊರರೋಗಿಗಳ ವಿಭಾಗವನ್ನು ಶುರು ಮಾಡಲಾಗಿದೆ. ಮುಂದುವರೆದು ಮಸೀದಿ ಪ್ರಾರ್ಥನಾ ಮಂದಿರ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ ಗ್ರಂಥಾಲಯ, ಸಾಮೂಹಿಕ ಅಡುಗೆ ಕೋಣೆ, ಸಂಶೋಧನಾ ಕೇಂದ್ರಗಳಿವೆ. […]