ಯುದ್ಧ ನಿಲ್ಲಿಸುವಂತೆ ಪುಟಿನ್ ಮೇಲೆ ಒತ್ತಡ ಹೇರಲು ಭಾರತಕ್ಕೆ ಉಕ್ರೇನ್ ಒತ್ತಾಯ

ಕ್ಯಿವ್,ಮಾ.6- ಭಾರತ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳ ಹಿತಾಸಕ್ತಿಗಾಗಿ ಯುದ್ಧವನ್ನು ತಕ್ಷಣ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ಪುಟೀನ್ ಮೇಲೆ ಒತ್ತಡ ಹೇರಬೇಕೆಂದು ಉಕ್ರೇನ್ ಒತ್ತಾಯಿಸಿದೆ. ಉಕ್ರೇನ್‍ನ ವಿದೇಶಾಂಗ ಸಚಿವ ಡ್ಯಾಂಪ್ರೋಕುಲೇಬ್ ಮಾಧ್ಯಮಗಳಿಗೆ ವಿಶೇಷ ಸಂದರ್ಶನ ನೀಡಿದ್ದು, ಈ ಯುದ್ಧದಿಂದ ಬಹಳಷ್ಟು ದೇಶಗಳು ತೊಂದರೆ ಅನುಭವಿಸಲಿದೆ ಎಂದು ಎಚ್ಚರಿಸಿದ್ದಾರೆ. ವಿಶೇಷವಾಗಿ ಭಾರತ ಉಕ್ರೇನ್‍ನ ಕೃಷಿ ಉತ್ಪನ್ನಗಳ ಬಹುದೊಡ್ಡ ಗ್ರಾಹಕ. ಒಂದು ವೇಳೆ ಯುದ್ಧ ಮುಂದುವರೆದಿದ್ದೆಯಾದರೆ ನಮಗಿಲ್ಲಿ ಬಿತ್ತನೆ ಮಾಡಲು ಕೃಷಿ ಉತ್ಪನ್ನಗಳನ್ನು ಬೆಳೆಯಲು ಕಷ್ಟವಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ […]