ಜಮ್ಮು-ಕಾಶ್ಮೀರದಲ್ಲಿ ಉದ್ಯೋಗ ಬದಲಿಗೆ ಬುಲ್ಡೋಜರ್ ಬಳಕೆ : ರಾಹುಲ್ ಟೀಕೆ

ನವದೆಹಲಿ,ಫೆ.12- ಜಮ್ಮು ಕಾಶ್ಮೀರದ ಜನ ಉದ್ಯೋಗ, ಉತ್ತಮ ವ್ಯವಹಾರ ಹಾಗೂ ಪ್ರೀತಿಯನ್ನು ಬಯಸುತ್ತಿದ್ದಾರೆ. ಅದರ ಬದಲಿಗೆ ಕೇಂದ್ರ ಸಕ್ರಾ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಬುಲ್ಡೋಜರ್ ಬಳಸುತ್ತಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಉದ್ಯೋಗ, ಉತ್ತಮ ವ್ಯಾಪಾರ ಮತ್ತು ಪ್ರೀತಿ ಬೇಕಿತ್ತು, ಆದರೆ ಅವರಿಗೆ ಏನು ಸಿಕ್ಕಿತು? ಬಿಜೆಪಿಯ ಬುಲ್ಡೋಜರ್ ಎಂದು ಕಿಡಿಕಾರಿದ್ದಾರೆ. ಹಲವು ದಶಕಗಳಿಂದ ಶ್ರಮದಿಂದ ಬೆಳೆಯುತ್ತಿದ್ದ ಭೂಮಿಯನ್ನು ಇಂದು ಅವರಿಂದ ಕಿತ್ತುಕೊಳ್ಳಲಾಗುತ್ತಿದೆ. […]
ಟೆರರ್ ಫಂಡಿಂಗ್ : ಕಾಶ್ಮೀರದ 12 ಸ್ಥಳಗಳಲ್ಲಿ ಎನ್‍ಐಎ ದಾಳಿ
ಶ್ರೀನಗರ,ಆ.8- ನಿಷೇಧಿತ ಸಂಘಟನೆಯ ಹೆಸರಿನಲ್ಲಿ ಉಗ್ರವಾದಿ ಚಟುವಟಿಕೆಗಳಿಗೆ ಹಣಕಾಸಿನ ಸಂಪನ್ಮೂಲ ಸಂಗ್ರಹಿಸುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ ಇಂದು ಕಣಿವೆ ರಾಜ್ಯದ 12 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.ದೋಹ ಜಿಲ್ಲೆಯ ದಾರಾ-ಗುಂಡಾನ್, ಮುನ್ಸಿಮೊಹಲ್ಲಾ, ಅಕ್ರಮ್‍ಬಂದ್, ನಗ್ರಿನಹಿಬಸ್ತಿ , ಕರೋಟಿಬಗ್ವಾರ್, ತೆಲೆಲಾ, ಮಲೋತಿಬಲ್ಲ ಮತ್ತು ಜಮ್ಮುವಿನ ಬತಿಂದಿ ಪ್ರದೇಶಗಳಲ್ಲಿ ಈ ದಾಳಿ ನಡೆಸಲಾಗಿದೆ. ಕಳೆದ ವರ್ಷ ಫೆ.5ರಂದು ಎನ್‍ಐಎ ಸ್ವಯಂಪ್ರೇರಿತವಾಗಿ ದಾಖಲಿಸಿದ್ದ ಎಫ್‍ಐಆರ್ ಆಧರಿಸಿ ಕಾರ್ಯಾಚರಣೆ ನಡೆದಿದೆ. ಜಮಾತಿ-ಇ-ಇಸ್ಲಾಮಿಕ್ ಸಂಘಟನೆಯ ಪದಾಧಿಕಾರಿಗಳ ವಿರುದ್ಧ ಶೋಧ ಕಾರ್ಯಾಚರಣೆ ನಡೆಸಿದೆ. […]