ಕ್ವಾಡ್ ಏಷ್ಯಾದ ನ್ಯಾಟೋ ಅಲ್ಲ : ಜೈಶಂಕರ್

ಮ್ಯೂನಿಚ್,ಫೆ.20- ಕ್ವಾಡ್ ಒಂದು ಏಷ್ಯನ್ ನ್ಯಾಟೋ (ಎನ್‍ಎಟಿಒ) ಇದ್ದಂತೆ ಎಂಬ ಅಭಿಪ್ರಾಯವನ್ನು ತಿರಸ್ಕರಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕೆಲವು ಆಸಕ್ತ ಶಕ್ತಿಗಳು ಈ ರೀತಿಯ ಹೋಲಿಕೆಗಳನ್ನು ಮಾಡುತ್ತವೆ. ಅದಕ್ಕೆ ಯಾರೂ ಮನ ಸೋಲ ಬಾರದು ಎಂದು ಹೇಳಿದ್ದಾರೆ. ನಾಲ್ಕು ರಾಷ್ಟ್ರಗಳ ಗುಂಪಾಗಿರುವ ಕ್ವಾಡ್ 21ನೆಯ ಶತಮಾನದ ಒಂದು ಬಗೆಯ ಪ್ರತಿಕ್ರಿಯಾತ್ಮಕ ಮಾರ್ಗವಾಗಿದೆ. ಇದು ಅಧಿಕ ವಿಭಿನ್ನ ಮತ್ತು ಚದುರಿದ ಜಗತ್ತಿಗಾಗಿ ಇದೆ ಎಂದು ಜೈ ಶಂಕರ್ ಪ್ರತಿಪಾದಿಸಿದ್ದಾರೆ. ಜೈಶಂಕರ್ ಅವರು ನಿನ್ನೆ ಸಂಜೆ ಮ್ಯೂನಿಚ್ […]