ಸಖತ್ ಸದ್ದು ಮಾಡ್ತಿದೆ ಜೇಮ್ಸ್ ಚಿತ್ರದ ‘ಟ್ರೇಡ್‍ಮಾರ್ಕ್’ ಸಾಂಗ್

ಬೆಂಗಳೂರು, ಮಾ.1- ಕಳೆದೆರಡು ದಿನಗಳಿಂದ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಗೀತೆಯ ಬಿಡುಗಡೆಗೆ ಕಾದಿದ್ದ ಅಪ್ಪುವಿನ ಅಭಿಮಾನಿಗಳಿಗೆ ಚಿತ್ರತಂಡವು ಗೀತೆಯೊಂದನ್ನು ಯುಟ್ಯೂಬ್‍ನಲ್ಲಿ ಬಿಡುಗಡೆ ಮಾಡುವ ಮೂಲಕ ಶಿವರಾತ್ರಿ ಹಬ್ಬದ ಉಡುಗೊರೆ ನೀಡಿದ್ದಾರೆ. ಅಪ್ಪು ನಟನೆಯ ಕೊನೆಯ ಚಿತ್ರವಾದ ಜೇಮ್ಸ್ ಚಿತ್ರವು ಈಗಾಗಲೇ ಪೋಸ್ಟರ್‍ಗಳು, ಟೀಸರ್‍ಗಳು ಸಾಕಷ್ಟು ಸದ್ದು ಮಾಡುತ್ತಿದ್ದು ಇಂದು ಬಿಡುಗಡೆಯಾಗಿರುವ ಟ್ರೇಡ್ ಮಾರ್ಕ್ ಗೀತೆಯು ಅಭಿಮಾನಿ ಗಳ ಮನಸ್ಸನ್ನು ಗೆದ್ದಿದೆ.ಇತ್ತೀಚೆಗೆ ಬಿಡುಗಡೆಗೊಂಡಿದ್ದ ಜೇಮ್ಸ್ ಚಿತ್ರದ ಟೀಸರ್‍ನಲ್ಲಿ ಪುನೀತ್‍ರಾಜ್‍ಕುಮಾರ್‍ರ ಖಡಕ್ ಲುಕ್, ಸ್ಟಂಟ್ಸ್ , ಡೈಲಾಗ್‍ಗಳು […]