ಬಣ್ಣದ ಲೋಕದ ನಂಟು ಕಳಚಿದ `ಸಾಕ್ಷಾತ್ಕಾರ’ ನಟಿ ಜಮುನಾ

ಹೈದ್ರಾಬಾದ್, ಜ. 27- ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಹುಭಾಷಾ ನಟಿ ಜಮುನಾ (86) ಇಂದು ಬಣ್ಣದ ಲೋಕದ ನಂಟು ಕಳಚಿಕೊಂಡು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ತಮ್ಮ ನಿವಾಸದಲ್ಲೇ ಇಂದು ಬೆಳಗ್ಗೆ ನಿಧನರಾದ ಜಮುನಾ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಹೈದ್ರಾಬಾದ್‍ನ ಫಿಲಂ ಚೇಂಬರ್‍ನಲ್ಲಿ ವ್ಯವಸ್ಥೆ ಮಾಡಲಾಗಿತ್ತು, ಚಿತ್ರರಂಗ, ರಾಜಕೀಯ ಗಣ್ಯರು ಹಾಗೂ ಅಪಾರ ಅಭಿಮಾನಿಗಳು ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ. ಮೇರು ನಟಿ ಜಮುನಾ ಅವರ ನಿಧನಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗಮೋಹನ್‍ರೆಡ್ಡಿ, ತೆಲಂಗಾಣದ ಸಿಎಂ […]