ಜನಪದ ವಿವಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆ ಆಗಲಿ : ಸಚಿವ ಕಾರಜೋಳ
ಬೆಂಗಳೂರು,ಸೆ.19- ಹಾವೇರಿಯಲ್ಲಿರುವ ಜನಪದ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಬೇಕು. ಆಗ ಮಾತ್ರ ಅಲ್ಲಿ ಚಟುವಟಿಕೆಗಳು ನಡೆಯುತ್ತವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು. ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಅವರು, ಜಾನಪದ ವಿಶ್ವವಿದ್ಯಾಲಯ ನನ್ನ ಕಾಲದಲ್ಲಿಯೇ ಪ್ರಾರಂಭ ಆಯ್ತು. ಕರ್ನಾಟಕದ ಮಧ್ಯಭಾಗದಲ್ಲಿ ಇರಬೇಕು ಎಂದು ಹಾವೇರಿಯಲ್ಲಿ ಜಾನಪದ ವಿವಿಯನ್ನು ಪ್ರಾರಂಭಿಸಲಾಯ್ತು. ಕೆಲವರ ತಲೆಯಲ್ಲಿ ಏನಿತ್ತು ಅಂದ್ರೇ ವಿಶ್ವವಿದ್ಯಾಲಯ ಎಂದು ಬಂದುಬಿಟ್ಟರೇ ಉನ್ನತ ಶಿಕ್ಷಣ ಇಲಾಖೆಯಲ್ಲಿಯೇ […]