ಗಂಡನ ಅಕ್ರಮ ಸಂಬಂಧಕ್ಕೆ ಪತ್ನಿಯ ಕೊಲೆ, ಯೋಧನ ಬಂಧನ

ಬರೇಲಿ,ಮಾ.17-ಅಕ್ರಮ ಸಂಬಂಧ ಮತ್ತು ಬ್ಲಾಕ್‍ಮೇಲ್ ಪ್ರಕರಣದಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಯೋಧನೊಬ್ಬನನ್ನು ಉತ್ತರ ಪ್ರದೇಶದ ಬರೇಲಿ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 13 ರಂದು ಸೇನಾ ಯೋಧ ಮನೋಜ್ ಸೇನಾಪತಿ ಅವರ ಪತ್ನಿ ಸುದೇಷ್ಣಾ ಅವರ ಹತ್ಯೆಯಾಗಿತ್ತು. ಪೊಲೀಸರು ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ತನಿಖೆಯ ಸಮಯದಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ನೆರೆ ಮನೆಯಲ್ಲಿ ವಾಸವಿದ್ದ ಮತ್ತೊಬ್ಬ ಯೋಧ ನಿತೀಶ್ ಪಾಂಡೆಯನ್ನು ಬಂಧಿಸಿದರು. ನಿತೀಶ್ ಪತ್ನಿಯೊಂದಿಗೆ ಮನೋಜ್ ಅಕ್ರಮ […]