ಕ್ಷುಲ್ಲಕ ವಿಚಾರಕ್ಕೆ ಘರ್ಷಣೆ : ಚುನಾವಣೆ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಸಾವು

ಪೆÇರಬಂದರು,ನ.27-ಕ್ಷಲ್ಲಕ ವಿಚಾರಕ್ಕೆ ಐಆರ್‌ಬಿ ಕಾನ್‍ಸ್ಟೆಬಲ್ ಸಹೋದ್ಯೋಗಿಗಳ ಮೇಲೆ ರೈಫಲ್‍ನಿಂದ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಪೊರಬಂದಿರಿನಿಂದ 25 ಕಿ.ಮೀ ದೂರದಲ್ಲಿರುವ ತುಕಡಾಗೋಸ ಗ್ರಾಮದ ಸೈಕ್ಲೋನ್ ಸೆಂಟರ್‍ನಲ್ಲಿ ಚುನಾವಣಾ ಕರ್ತವ್ಯಕ್ಕೆಂದು ನಿಯೋಜನೆಗೊಂಡಿದ್ದ ಯೋಧರು ತಂಗಿದ್ದರು. ನಿನ್ನೆ ಸಂಜೆ ಕ್ಷುಲ್ಲಕ ವಿಚಾರಕ್ಕೆ ಸಿಆರ್‍ಪಿಎಫ್ ಯೋಧನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ರೈಫಲ್‍ನಿಂದ ಗುಂಡು ಹಾರಿಸಿದ್ದಾನೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತಿಬ್ಬರು ಗಾಯಗೊಂಡಿದ್ದಾರೆ. ಅವರಲ್ಲಿ ಗಾಯಗೊಂಡವರಲ್ಲಿ ಒಬ್ಬನ ಹೊಟ್ಟೆಗೆ ಹಾಗೂ ಒಬ್ಬನ ಕಾಲಿಗೆ ಗುಂಡು ತಗುಲಿದೆ […]