12ರಿಂದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯುತ್ಸವ

ಬೆಂಗಳೂರು,ಜ.7- ಶ್ರೀ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತ್ಯುತ್ಸವ ಹಾಗೂ 10ನೇ ವರ್ಷದ ಸಂಸ್ಕರಣಾ ಮಹೋತ್ಸವ ಇದೇ 12ರಿಂದ 18ರವರೆಗೆ ನಡೆಯಲಿದೆ. ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆಯಲಿರುವ ಈ ಮಹೋತ್ಸವದ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಯವರುವಹಿಸಲಿದ್ದಾರೆ. ಜಾರ್ಖಾಂಡ್ನಲ್ಲಿ ಮತ್ತೆ ಬುಗಿಲೇದ್ದ ಪರಸ್ನಾಥ್ ಬೆಟ್ಟದ ವಿವಾದ ಜ.12ರಂದು ರೈತರ ಸಮಾವೇಶ, 13ರಂದು ಹೋಮ, ಹವನದಿ ಧಾರ್ಮಿಕ ಕಾರ್ಯಕ್ರಮ, 14ರಂದು ಹಿರಿಯ ವಿದ್ಯಾರ್ಥಿಗಳ ವೇದಿಕೆ ಸಮಾರಂಭ, […]