ರಸ್ತೆಯಲ್ಲಿ ನಿಲ್ಲಿಸಿದ್ದ ಜೆಸಿಬಿಯನ್ನೇ ಕದ್ದೊಯ್ದ ಕಳ್ಳರು

ಬೆಂಗಳೂರು,ಜ.19- ನಗರದ ಆರ್‍ಪಿ ರಸ್ತೆಯಲ್ಲಿ ನಿಲ್ಲಿಸಿದ್ದ 7 ಲಕ್ಷ ಮೌಲ್ಯದ ಜೆಸಿಬಿ ವಾಹನವನ್ನು ಕಳ್ಳತನ ಮಾಡಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಮಮೂರ್ತಿ ಎಂಬುವರು 2018ನೇ ಸಾಲಿನಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪ್ರತಾಪ್ ರೆಡ್ಡಿ ಎಂಬುವರಿಂದ ಜೆಸಿಬಿ ವಾಹನ ಖರೀಸಿದ್ದರು. ಚಾಲಕರಾದ ಈಶ್ವರ್ ಅನಂತ, ದೇವು ಮತ್ತು ಅಂಬರೀಶ್ ಎಂಬುವರು ಈ ಜೆಸಿಬಿ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ಚಾಲಕನಾದ ಲಕ್ಷ್ಮಣ್ ಎಂಬುವರನ್ನು ಇಟ್ಟುಕೊಂಡು ರಾಮಮೂರ್ತಿ ಬಾಡಿಗೆಗೆ ಓಡಿಸಿಕೊಂಡಿದ್ದರು. ಜ.11ರಂದು ರಾತ್ರಿ 10 ಗಂಟೆ […]