ಬಿಜೆಪಿ ಸೇರುವ ಕುರಿತು ನಾನು ಈವರೆಗೂ ತೀರ್ಮಾನ ಮಾಡಿಲ್ಲ: ಹೊರಟ್ಟಿ

ಹುಬ್ಬಳ್ಳಿ,ಫೆ.20- ಬಿಜೆಪಿ ಸೇರುವ ಕುರಿತು ನಾನು ಈವರೆಗೂ ತೀರ್ಮಾನ ಕೈಗೊಂಡಿಲ್ಲ. ಮೇವರೆಗೂ ಯಾವುದೇ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಎರಡು ಹೆಸರುಗಳು ಹೈಕಮಾಂಡ್ ಬಳಿ ಹೋಗಿದ್ದು, ಅದರಲ್ಲಿ ನನ್ನ ಹೆಸರು ಇದ್ದರೂ ಇರಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ.ನನ್ನ ಮೇಲೆ ಅವರಿಗೆ ಪ್ರೀತಿ ಜಾಸ್ತಿ, ಅದಕ್ಕೆ ಅಷ್ಟು ಕಾಳಜಿಯಿಂದ ಹೇಳಿರುತ್ತಾರೆ ಎಂದರು. ನಾವು ಅನ್ಯಾಯ […]