ಜನತಾ ಮಿತ್ರ ಸಮಾರೋಪ : ನಾಳೆ ಜೆಡಿಎಸ್ ಸಭೆ

ಬೆಂಗಳೂರು,ಆ.28-ಪಂಚರತ್ನ ಕಾರ್ಯಕ್ರಮ ಪ್ರಾರಂಭಿಸುವುದು ಹಾಗೂ ಜನತಾಮಿತ್ರ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಸುವ ಸಂಬಂಧ ನಾಳೆ ಜೆಡಿಎಸ್‍ನ ಮಹತ್ವದ ಸಭೆ ನಡೆಯಲಿದೆ. ನಾಳೆ ಮಧ್ಯಾಹ್ನ ಜೆಪಿಭವನದಲ್ಲಿ ನಡೆಯುವ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಮುಖಂಡರು ಹಾಗೂಪಕ್ಷದ ಪ್ರಮುಖರನ್ನು ಸಭೆಗೆ ಆಹ್ವಾನಿಸಲಾಗಿದೆ. ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪಂಚರತ್ನ ಕಾರ್ಯಕ್ರಮವನ್ನು ಮುಂದೂಡುತ್ತಾ ಬರಲಾಗುತ್ತಿತ್ತು. ಮಳೆಯ ಪ್ರಮಾಣ ತಗ್ಗಿದ ಕೂಡಲೇ ಪಂಚರತ್ನ ಕಾರ್ಯಕ್ರಮವನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಮೈಸೂರಿನ ಚಾಮುಂಡೇಶ್ವರಿ ದೇವಿಗೆ ವಿಶೇಷ […]