ಜೆಡಿಎಸ್ ಪುನರ್ ಸಂಘಟನೆಗೆ ಆದ್ಯತೆ

ಬೆಂಗಳೂರು, ಜ.19- ಪಕ್ಷ ಪುನರ್ ಸಂಘಟನೆಗೆ ಒತ್ತು ನೀಡಿರುವ ಜೆಡಿಎಸ್ ನಾಯಕರು ವಿಸಿಟಿಂಗ್ ಕಾರ್ಡ್ ಶೂರರಿಗೆ ಗೇಟ್‍ಪಾಸ್ ನೀಡಲು ಉದ್ದೇಶಿಸಿದ್ದಾರೆ. ಮುಂಬರುವ 2023ರ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷವನ್ನು ಸಮಗ್ರವಾಗಿ ಬಲಗೊಳಿಸಲು ಕಾರ್ಯಪ್ರವೃತ್ತರಾಗಿದ್ದು, ಆ ನಿಟ್ಟಿನಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಮುಂದಾಗಿದ್ದಾರೆ. ಸ್ವಂತ ಶಕ್ತಿ ಮೇಲೆ ಪಕ್ಷವನ್ನು ಅಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿರುವ ನಾಯಕರು ಆಂತರಿಕವಾಗಿ ಪಕ್ಷದಲ್ಲಿ ಮಹತ್ತರ ಬದಲಾವಣೆ ತರಲು ಚಾಲನೆ ನೀಡಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಪಕ್ಷದಲ್ಲಿನ ವಿವಿಧ ಹುದ್ದೆ, ಸ್ಥಾನಮಾನ ಹೊಂದಿ […]