ನವೆಂಬರ್ 2ನೇ ವಾರದಿಂದ ಪಂಚರತ್ನ ರಥಯಾತ್ರೆ ಪ್ರಾರಂಭ

ಬೆಂಗಳೂರು,ನ.4- ನಿರಂತರ ಮಳೆಯಿಂದಾಗಿ ಮುಂದೂಡಲಾಗಿರುವ ಜೆಡಿಎಸ್ನ ಪಂಚರತ್ನ ರಥಯಾತ್ರೆಯು ನವೆಂಬರ್ ಎರಡನೇ ವಾರದಿಂದ ಪ್ರಾರಂಭವಾಗಲಿದೆ. ಈ ರಥಯಾತ್ರೆ ಪ್ರಾರಂಭದ ದಿನವೇ ಸಮಾವೇಶ ನಡೆಸಿ ಮುಂಬರುವ ವಿಧಾನಸಭೆ ಚುನಾವಣೆಯ ನೂರು ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗುತ್ತದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ಸಿದ್ಧತೆ ಪ್ರಾರಂಭಿಸುವಂತೆ ಸಂಭವನೀಯ ಅಭ್ಯರ್ಥಿಗಳಿಗೆ ಈಗಾಗಲೇ ನಿರ್ದೇಶನವನ್ನು ನೀಡಲಾಗಿದೆ. ಅಲ್ಲದೆ, ಪಂಚರತ್ನ ರಥಯಾತ್ರೆ ಯಶಸ್ವಿಗೊಳಿಸುವ ಹೊಣೆಗಾರಿಕೆಯನ್ನು ಆಯಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗೆ ವಹಿಸಲಾಗಿದೆ. ಜೆಡಿಎಸ್ನಿಂದ ಸ್ರ್ಪಸಿ ಚುನಾಯಿತರಾದ ಮೇಲೆ ಯಾವುದೇ ಕಾರಣಕ್ಕೂ ಆಸೆ, ಆಮಿಷಕ್ಕೆ ಒಳಗಾಗಿ […]