ಜೆಡಿಎಸ್ ಪಂಚರತ್ನ ರಥಯಾತ್ರೆ ಮತ್ತೆ ಮುಂದೂಡಿಕೆ

ಬೆಂಗಳೂರು,ನ.13- ಜೆಡಿಎಸ್‍ನ ಮಹತ್ವದ ಪಂಚರತ್ನ ರಥಯಾತ್ರೆಗೆ ಮತ್ತೆ ಮಳೆ ಅಡ್ಡಿಯಾಗಿದ್ದು, ನಾಳೆ ಪ್ರಾರಂಭವಾಗಬೇಕಿದ್ದ ಈ ಯಾತ್ರೆಯನ್ನು ನ.19ಕ್ಕೆ ಮುಂದೂಡಲಾಗಿದೆ. ಕಳೆದ ಎರಡು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಂಚರತ್ನ ರಥಯಾತ್ರೆಯನ್ನು ಮುಂದೂಡಲಾಗಿದೆ. ನವೆಂಬರ್ ಒಂದರಿಂದ ಪ್ರಾರಂಭ ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿತ್ತು. ಮುಳಬಾಗಿಲುವಿನ ಕುರುಡುಮಲೆ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಹೋಮ ನಡೆಸಲಾಗಿತ್ತು. ಪಂಚರತ್ನ ರಥಗಳಿಗೆ ಚಾಲನೆ ನೀಡಿ ಬಹಿರಂಗ ಸಮಾವೇಶ ಪ್ರಾರಂಭಿಸುವ ವೇಳೆಗೆ ಅಂದು ಸಹ ಜಿಟಿ ಜಿಟಿ ಮಳೆ ಆರಂಭವಾಗಿತ್ತು. […]