ಮೊದಲ ಹಂತದ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ತೆರೆ

ತುಮಕೂರು, ಡಿ.6- ಮುಂಬರುವ ವಿಧಾನಸಭೆ ಚುನಾವಣೆಗೆ ಇಟ್ಟುಕೊಂಡಿ ರುವ ಗುರಿ ತಲುಪುವುದರಲ್ಲಿ ಸಂಶಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪಷ್ಟ ಬಹುಮತ ಗಳಿಸುವ ಗುರಿಯಿಟ್ಟು ಹೋಗುತ್ತಿದ್ದು, ಅದನ್ನು ತಲುಪುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿಂದು ಮೊದಲನೆಯ ಹಂತದ ಪಂಚರತ್ನ ಯಾತ್ರೆ ಮುಕ್ತಾಯವಾಗಲಿದೆ. ಬೇರೆ ಬೇರೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಾಲ್ಕು ದಿನ ಪಂಚರತ್ನ ಯಾತ್ರೆಗೆ ಬಿಡುವು ನೀದಲಾಗುವುದು. ಡಿ.11 ರಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮತ್ತೆ ಪಂಚರತ್ನ ರಥಯಾತ್ರೆ […]