ಎಂಜಿನಿಯರ್ ಮನೆಯಲ್ಲಿ 1.35 ಲಕ್ಷದ ಚಿನ್ನ ಕದ್ದಿದ್ದ ಕಳ್ಳಿ ಬಂಧನ

ಬೆಂಗಳೂರು, ಮಾ.6- ಸಾಫ್ಟ್‍ವೇರ್ ಎಂಜಿನಿಯರ್ ಒಬ್ಬರ ಮನೆಯಲ್ಲಿ ಚಿನ್ನದ ಆಭರಣ ದೋಚಿಕೊಂಡು ಪರಾರಿಯಾಗಿದ್ದ ಮನೆ ಕೆಲಸದ ಮಹಿಳೆಯನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಂದ್ರಕಲಾ ಬಂಧಿತ ಮನೆಕೆಲಸದ ಮಹಿಳೆ. ಈಕೆ ಕಳೆದ 15 ತಿಂಗಳುಗಳಿಂದ ಸಾಫ್ಟ್‍ವೇರ್ ಎಂಜಿನಿಯರ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಇತ್ತೀಚೆಗೆ ಎಂಜಿನಿಯರ್ ಮನೆಯಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಆ ಸಂದರ್ಭದಲ್ಲಿ ಸುಮಾರು 1,35,000ರೂ. ಬೆಲೆ ಬಾಳುವ ಚಿನ್ನದ ಆಭರಣಗಳು ಕಳುವಾಗಿದ್ದವು. ಈ ಬಗ್ಗೆ ಚಂದ್ರಾ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ […]