ಬೆಂಗಳೂರಲ್ಲಿ ಆಭರಣ ಅಂಗಡಿಗಳ ಮೇಲೆ ಐಟಿ ದಾಳಿ

ಬೆಂಗಳೂರು,ಜ.31- ತೆರಿಗೆ ವಂಚನೆ ಹಿನ್ನಲೆಯಲ್ಲಿ ಪ್ರಮುಖ 25ಕ್ಕೂ ಹೆಚ್ಚು ಆಭರಣ ಮಾಲೀಕರ ಅಂಗಡಿ ಮತ್ತು ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಚಿಕ್ಕಪೇಟೆ, ಜಯನಗರ, ಯಶವಂತಪುರ, ಬಸವನಗುಡಿ ಸೇರಿದಂತೆ 25ಕ್ಕೂ ಹೆಚ್ಚು ಕಡೆ ದಾಳಿ ನಡೆಸಿರುವ ಅಧಿಕಾರಿಗಳು ತೆರಿಗೆ ವಂಚನೆ ಆರೋಪದ ಮೇಲೆ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬನಶಂಕರಿಯಲ್ಲಿರುವ ಪಾಶ್ರ್ವ ಫಾರ್ಮಾಸ್ಯುಟಿಕಲ್ ಮಾಲೀಕರಾಗಿರುವ ರಾಜೇಶ್ಕುಮಾರ್ ಜೈನ್ ಅವರ ಅಂಗಡಿ ಹಾಗೂ ಜಯನಗರದ ಮನೆ ಮೇಲೆ 15ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಏಕಾಏಕಿ […]