‘ಜನತಾ ಜಲಧಾರೆ’ ಕಾರ್ಯಕ್ರಮ ಮುಂದೂಡಿದ ಜೆಡಿಎಸ್

ಬೆಂಗಳೂರು, ಜ.18-ರಾಜ್ಯಾದ್ಯಂತ ಪವಿತ್ರ ಜಲ ಸಂಗ್ರಹಿಸುವ ವಿಶೇಷ ಕಾರ್ಯಕ್ರಮ ಜನತಾ ಜಲಧಾರೆ ಮುಂದೂಡಿಕೆಯಾಗಲಿದೆ. ಗಣರಾಜ್ಯೋತ್ಸವ ದಿನವಾದ ಜ.26ರಂದು ಜನತಾ ಜಲಧಾರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಜೆಡಿಎಸ್ ಉದ್ದೇಶಿಸಿತ್ತು. ಆದರೆ, ರಾಜ್ಯದಲ್ಲಿ ನಿರಂತರವಾಗಿ ಏರುತ್ತಿರುವ ಕೋವಿಡ್‍ನಿಂದಾಗಿ ಉದ್ದೇಶಿತ ಜನತಾ ಜಲಧಾರೆ ಕಾರ್ಯಕ್ರಮವನ್ನು ಮುಂದೂಡಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ. ಫೆಬ್ರವರಿ ಅಂತ್ಯದವರೆಗೂ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗುವ ಸಾಧ್ಯತೆ ವಿರಳ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲು ನಿರ್ಣಯಿಸಿದ್ದಾರೆ. ಜನತಾ ಜಲಧಾರೆಗಾಗಿ ಗಂಗಾರಥವನ್ನು ಸಿದ್ಧಗೊಳಿಸಲಾಗಿತ್ತು. ನಾಡಿನ ಜೀವನದಿಗಳಿಂದ […]