“ಕಂಗನಾ ರಾಣಾವತ್ ಕೆನ್ನೆಯಂತೆ ನುಣುಪಾದ ರಸ್ತೆ ನಿರ್ಮಿಸುತ್ತೇವೆ”

ನವದೆಹಲಿ, ಜ.15- ಪದ್ಮಶ್ರೀ ಕಂಗಣಾ ರಾಣಾವತ್ ಅವರ ಕೆನ್ನೆಯಷ್ಟು ನುಣುಪಾದ ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳುವ ಮೂಲಕ ಜಾರ್ಖಾಂಡ್‍ನ ಕಾಂಗ್ರೆಸ್ ಶಾಸಕ ನೀಡಿರುವ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ. ಜಂತಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಇಫ್ರಾನ್ ಅನ್ಸಾರಿ ಅವರು ಸ್ವಯಂ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ಕ್ಷೇತ್ರದಲ್ಲಿ ವಿಶ್ವ ದರ್ಜೆಯ ಗುಣಮಟ್ಟದಲ್ಲಿ 14 ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಅವು ನಟಿ ಕಂಗಣಾ ರಾಣಾವತ್ ಅವರ ಕೆನ್ನೆಗಿಂತಲೂ ನುಣುಪಾಗಿರಲಿವೆ ಎಂದು ಹೇಳಿದ್ದಾರೆ. ಶಾಸಕರ ಹೇಳಿಕೆ ತೀವ್ರ ಆಕ್ಷೇಪಗಳು ಕೇಳಿ […]