ಜ್ಞಾನಭಾರತಿ ವಿವಿ ಆವರಣದಲ್ಲಿ ಚಿರತೆ ಪ್ರತ್ಯಕ್ಷ

ಬೆಂಗಳೂರು,ಜ.12- ಜ್ಞಾನಭಾರತಿ ವಿವಿ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ. ವಿವಿ ಆವರಣದಲ್ಲಿರುವ ಎನ್‍ಎಸ್‍ಎಸ್ ಭವನದ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವಾಯು ವಿಹಾರಿಗಳು ವಿವಿ ಆಡಳಿತ ಮ ಂಡಳಿಯ ಗಮನಕ್ಕೆ ತಂದಿದ್ದರು. ಹೀಗಾಗಿ ವಿದ್ಯಾರ್ಥಿಗಳು ಎಚ್ಚರ ವಹಿಸುವಂತೆ ವಿವಿ ಆಡಳಿತ ಮನವಿ ಮಾಡಿಕೊಂಡಿದೆ. ಎನ್‍ಎಸ್‍ಎಸ್ ಭವನದ ಹಿಂಭಾಗ ನೂರಾರು ಎಕರೆ ವಿಸ್ತೀರ್ಣದ ಕಾಡು ಇದೆ. ಹೀಗಾಗಿ ಆ ಕಾಡಿನಲ್ಲಿ ಚಿರತೆ ಇರಬಹುದು ಎಂದು ಶಂಕಿಸಲಾಗಿದೆ. ಎರಡು ದಿನಗಳ ಹಿಂದೆ ಎನ್‍ಎಸ್‍ಎಸ್ ಭವನದ ಸಮೀಪ ವಾಯ ವಿಹಾರ […]