ಮೈಸೂರು ಜಿಲ್ಲೆ ಪ್ರವೇಶಿಸಿದ ಭಾರತ ಐಕ್ಯತಾ ಯಾತ್ರೆ
ಮೈಸೂರು, ಅ.1- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಇಂದು ಚಾಮರಾಜನಗರ ಗಡಿ ದಾಟಿ ಮೈಸೂರು ಜಿಲ್ಲೆ ಪ್ರವೇಶಿಸಿದೆ. ರಾಜ್ಯದಲ್ಲಿ ಎರಡನೆ ದಿನದ ಯಾತ್ರೆ ಇಂದು ಬೆಳಗ್ಗೆ ಮಳೆಯ ಕಾರಣಕ್ಕೆ ಕೆಲ ಕಾಲ ವಿಳಂಬವಾಗಿ ಆರಂಭವಾಗಿ ಆರಂಭವಾಯಿತು. ಮುಂಜಾನೆ 6.30ಕ್ಕೆ ಯಾತ್ರೆ ಆರಂಭಕ್ಕೆ ಸಮಯ ನಿಗದಿ ಪಡಿಸಲಾಗಿತ್ತು. ಆದರೆ ಮಳೆಯ ಕಾರಣಕ್ಕೆ ಎಂಟು ಗಂಟೆ ಸುಮಾರಿಗೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ತೊಂಡವಾಡಿ ಗೇಟ್‍ನಿಂದ ಆರಂಭವಾಯಿತು. ಮೈಸೂರು ಜಿಲ್ಲೆ ಪ್ರವೇಶಿಸಿದ ಪಾದಯಾತ್ರೆ […]
ಭಾರತ್ ಐಕ್ಯತಾ ಯಾತ್ರೆಗೆ ಕೇರಳದಲ್ಲಿ ಯಶಸ್ಸು
ನವದೆಹಲಿ, ಸೆ.29- ಭಾರತ್ ಐಕ್ಯತಾ ಯಾತ್ರೆ ಕೇರಳದಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಕೇರಳ ನನ್ನ ಮನೆ, ನನಗೆ ಮನೆಯಿಂದ ತುಂಬು ಪ್ರೀತಿ ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ. ನಾನು ಎಷ್ಟು ಪ್ರೀತಿ ಕೊಟ್ಟೆ ಎಂಬುದು ಮುಖ್ಯವಲ್ಲ. ಆದರೆ ಏನೇ ಕೊಟ್ಟರು ಅದಕ್ಕಿಂತಲೂ ಹೆಚ್ಚಿನದನ್ನು ಕೇರಳದ ಜನ ನನಗೆ ಮರಳಿ ನೀಡಿದ್ದಾರೆ. ನಾನು ಸದಾ ಕಾಲ ಕೇರಳಕ್ಕೆ ಋಣಿಯಾಗಿದ್ದೇನೆ ಎಂದು ಧನ್ಯವಾದ ಹೇಳಿದ್ದಾರೆ. ಕೇರಳದ 18 ದಿನಗಳ ಪಾದಯಾತ್ರೆಯಲ್ಲಿ […]