ಸಚಿವರಾಗೋ ಆಸೆಯಿಂದ ಬಿಜೆಪಿ ಸೇರಿದ್ದ ಪುಟ್ಟಣ್ಣ : NRR ಬಹಿರಂಗ ಪತ್ರ

ಬೆಂಗಳೂರು,ಮಾ.15- ಕೇವಲ ಸಚಿವರಾಗುವ ಉದ್ದೇಶದಿಂದ ಮಾತ್ರ ನೀವು ಬಿಜೆಪಿ ಪಕ್ಷಕ್ಕೆ ಸೇರಿದ್ದಿರಾ ಎಂಬುದು ಇದೀಗ ಬಹಿರಂಗವಾಗಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಮಾಜಿ ಶಾಸಕ ಪುಟ್ಟಣ್ಣ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪುಟ್ಟಣ್ಣ ಅವರು ಇತ್ತಿಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಸ್ರ್ಪಧಿಸಲು ಮುಂದಾಗಿರುವ ಸಂದರ್ಭದಲ್ಲೇ ರಮೇಶ್ […]

ಪ್ರಭಾವಿ ಒಕ್ಕಲಿಗ ಮುಖಂಡರಿಗೆ ಬಿಜೆಪಿ ಗಾಳ

ಬೆಂಗಳೂರು,ಮಾ.8- ಒಂದು ವೇಳೆ ಮನವೊಲಿ ಕೆಗೂ ಬಗ್ಗದೆ ವಸತಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರಲು ಮುಂದಾದರೆ ಬಿಜೆಪಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ರಣತಂತ್ರ ರೂಪಿಸಿದೆ. ಕೊನೆ ಕ್ಷಣದವರೆಗೂ ಸೋಮಣ್ಣ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನವನ್ನು ನಡೆಸಬೇಕು. ಅಷ್ಟಕ್ಕೂ ಜಗ್ಗದೆ ಪಕ್ಷ ಬಿಡುವ ತೀರ್ಮಾನಕ್ಕೆ ಬಂದರೆ ಬೆಂಗಳೂರು ಪ್ರತಿನಿಸುವ ಒಕ್ಕಲಿಗ ಸಮುದಾಯದ ಪ್ರಭಾವಿ ಇಬ್ಬರು ಮುಖಂಡರಿಗೆ ಬಿಜೆಪಿ ಗಾಳ ಹಾಕಿದೆ. ಕಳೆದ ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಸೋಮಣ್ಣಎದುರು ರಾಜಕೀಯ ಜಿದ್ದು ಇಟ್ಟುಕೊಂಡಿರುವ ಮಾಜಿ ಸಚಿವರನ್ನು ಮತ್ತು […]

ಕಾಂಗ್ರೆಸ್ ಬಿಜೆಪಿಯಿಂದ ಎಂಇಪಿಗೆ ಸೇರ್ಪಡೆ

ಬೆಂಗಳೂರು ಮಾರ್ಚ್ 2, 2023: ಸುಮಾರು 25 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದ ಡಾ. ಅಬ್ದುಲ್ ರೆಹಮಾನ್ ಅವರನ್ನು ಇಂದು ಅಖಿಲ ಭಾರತ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ (MEP)ಗೆ ರಾಜ್ಯದ ನೂತನ ಅಧ್ಯಕ್ಷರಾಗಿ ಪಕ್ಷ ಪುಸ್ ಕ್ಲಬ್ ನಲ್ಲಿ ನಲ್ಲಿ ಘೋಷಿಸಿತು. ನೂತನ ಅಧ್ಯಕ್ಷರನ್ನು ಮತ್ತು ಪಕ್ಷಕ್ಕೆ ಸೇರ್ಪಡೆಗೊಂಡ ಸರಸ್ವತಿ ಅವರನ್ನು ಎಂಇಪಿಯ ಕಾರ್ಯಾಧ್ಯಕ್ಷರಾದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಫರೀದಾ ಬೇಗಂ ಸ್ವಾಗತಿಸಿದರು. ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಕೇರಳದಲ್ಲಿ ರೈಲು ತಡೆದು ಪ್ರತಿಭಟನೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ […]

ಇಂದು ಬಿಜೆಪಿ ಸೇರಲಿದ್ದಾರೆ ಹಿರಿಯ ನಟ ಅನಂತನಾಗ್

ಬೆಂಗಳೂರು,ಫೆ.22- ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ತಮ್ಮ ಎರಡನೇ ರಾಜಕೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಂಜೆ 4.30ಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಸಚಿವ ಮುನಿರತ್ನ, ಡಾ. ಸುಧಾಕರ್ ಹಾಗೂ ಇತರ ನಾಯಕರು ಕಾರ್ಯಕ್ರದಲ್ಲಿ ಹಾಜರಿರಲಿದ್ದಾರೆ. ಮೂಲಗಳ ಪ್ರಕಾರ ಅನಂತನಾಗ್ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. […]

ರಾಹುಲ್ ಪಾದಯಾತ್ರೆಗೆ ಮೆಹಬೂಬಾ ಮುಫ್ತಿ ಸಾಥ್

ಕಾಶ್ಮೀರ,ಜ.28- ಭದ್ರತೆಯ ಲೋಪದಿಂದ ನಿನ್ನೆ ಸ್ಥಗಿತಗೊಂಡಿದ್ದ ರಾಹುಲ್‍ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ ಇಂದು ಅಂತಿಪೊರಾದಿಂದ ಶುರುವಾಯಿತು. ಸ್ಥಳೀಯ ಪಿಡಿಪಿಯ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇಂದು ರಾಹುಲ್‍ಗಾಂಧಿಯೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ತೀವ್ರವಾದ ಚಳಿಯಿಂದ ತತ್ತರಿಸಿರುವ ರಾಹುಲ್‍ಗಾಂಧಿ ಇಷ್ಟು ದಿನಗಳ ಬಳಿಕ ಇಂದು ಪಾದಯಾತ್ರೆಯಲ್ಲಿ ಜರ್ಕಿನ್ ಮತ್ತು ತಲೆ ಟೋಪಿ ಧರಿಸಿ ನಡಿಯಲ್ಲಿ ಪಾಲ್ಗೊಂಡಿದ್ದರು. ನಿನ್ನೆ ನ್ಯಾಷನಲ್ ಕಾನರೆನ್ಸ್ ಪಕ್ಷದ ಓಮರ್ ಅಬ್ದುಲ್ಲಾ ಯಾತ್ರೆಯಲ್ಲಿ ಜೊತೆಗೂಡಿದ್ದರು. ಆದರೆ ಎರಡು ಕಿಲೋ ಮೀಟರ್ ನಡೆಯುತ್ತಿದ್ದಂತೆ ಭದ್ರತೆಯ ಲೋಪ ಕಾಣಿಸಿಕೊಂಡಿತ್ತು. […]

ರಾಹುಲ್ ಯಾತ್ರೆಯಲ್ಲಿ ಊರ್ಮಿಳಾ ಕಲರವ

ಜಮ್ಮು,ಜ.24- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಪಾಲ್ಗೊಂಡಿದ್ದರು. ಇಂದು ಬೆಳಗ್ಗೆ ಜಮ್ಮುವಿನ ನಗ್ರೋಟಾದ ಗ್ಯಾರಿಸನ್ ಪಟ್ಟಣದಿಂದ ಭಾರೀ ಶೀಥ ವಾತಾವರಣದ ನಡುವೆ ಪುನರಾರಂಭಗೊಂಡ ಯಾತ್ರೆಗೆ ರಾಜಕಾರಣಿಯಾಗಿ ಬದಲಾಗಿರುವ ಉರ್ಮಿಳಾ ಮಾತೋಂಡ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ. 1990ರ ದಶಕದಲ್ಲಿ ಜನಪ್ರಿಯರಾಗಿದ್ದ ಮಾತೋಂಡ್ಕರ್, 2019 ರ ಸೆಪ್ಟೆಂಬರ್‍ನಲ್ಲಿ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ, ಆರು ತಿಂಗಳ ಬಳಿಕ 2020 ರಲ್ಲಿ ಶಿವಸೇನೆಗೆ ಸೇರಿದ್ದರು. ಇಂದು ಕೆನೆ ಬಣ್ಣದ ಸಾಂಪ್ರದಾಯಿಕ ಕಾಶ್ಮೀರ […]

ರಾಹುಲ್‍ಗೆ ಸಾಥ್ ನೀಡಿದ RBI ಮಾಜಿ ಗವರ್ನರ್ ರಘುರಾಮ್ ರಾಜನ್

ನವದೆಹಲಿ,ಡಿ.14- ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ರಾಹುಲ್‍ಗಾಂಧಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ರಾಹುಲ್‍ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಘುರಾಮ್ ರಾಜನ್ ಅವರು ಕಾಣಿಸಿಕೊಂಡಿರುವುದು ಎಲ್ಲೇಡೆ ವೈರಲ್ ಅಗಿದೆ. ರಾಜಸ್ಥಾನದ ಸವಾಯಿ ಮಾಧೋಪುರದಿಂದ ಕಾಂಗ್ರೆಸ್‍ನ ಪಾದಯಾತ್ರೆ ಪುನರಾರಂಭವಾಗುತ್ತಿದ್ದಂತೆ ಮೆರವಣಿಗೆಯಲ್ಲಿ ರಾಜನ್ ಮತ್ತು ಗಾಂಧಿ ಚರ್ಚೆ ನಡೆಸುತ್ತ ಸಾಗುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಮಾಜಿ ಆರ್‍ಬಿಐ ಗವರ್ನರ್ ರಘುರಾಮ್ ರಾಜನ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಕಾಣಿಸಿಕೊಂಡಿರುವುದು . ದ್ವೇಷದ ವಿರುದ್ಧ ದೇಶವನ್ನು ಒಗ್ಗೂಡಿಸಲು […]

ಬಿಜೆಪಿ ಸೇರಿದರೆ ಕಳಂಕಿತರು ಸ್ವಚ್ಚಗೊಳ್ಳುತ್ತಿದ್ದಾರೆಯೇ?

ಬೆಂಗಳೂರು,ಅ.16- ಕಳಂಕಿತರು ಬಿಜೆಪಿಗೆ ಹೋಗುತ್ತಿದ್ದಂತೆ ಡ್ರೈಕ್ಲೀನಿಂಗ್ ಮಾದರಿಯಲ್ಲಿ ಸ್ವಚ್ಚಗೊಳ್ಳುತ್ತಿದ್ದಾರೆಯೇ? ಎಂದು ಎಐಸಿಸಿ ಅಧ್ಯಕ್ಷೀಯ ಸ್ಥಾನದ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆ ನಡೆದಾಗ ಆರೇಳು ರಾಜ್ಯಗಳಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಮತ್ತಿತರ ತನಿಖಾ ಸಂಸ್ಥೆಗಳನ್ನು ಬಳಸಿ ದೇಶದ್ರೋಹದ ಕಾನೂನು ದುರ್ಬಳಕೆ ಮೂಲಕ ಹಣ, ಅಧಿಕಾರದಿಂದ […]

ಬಿಜೆಪಿ ಸೇರಿದ ಹಿಮಾಚಲ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ

ನವದೆಹಲಿ, ಸೆ 28- ಹಿಮಾಚಲ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹರ್ಷ್ ಮಹಾಜನ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ನಿಧನರಾದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ನಿಕಟವರ್ತಿಯಾಗಿದ್ದ ಮಹಾಜನ್ ಮಾಜಿ ಸಚಿವರು ಆಗಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ದೆಹಲಿಯಲ್ಲಿರುವಂತೆ ಮಾ- ಬೇಟಾ ಹಿಡಿತ ಹೆಚ್ಚಾಗಿದೆ. ವಿರೋಧ ಪಕ್ಷವು ದೃಷ್ಟಿಹೀನ, ದಿಕ್ಕಿಲ್ಲದ ನಾಯಕತ್ವದ ಪಕ್ಷವಾಗಿದೆ ಎಂದು ಕಿಡಿಕಾರಿದ್ದಾರೆ. ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. […]