ರಾಜ್ಯಪಾಲರ ನೀರಸ ಭಾಷಣದಿಂದ ವಿಧಾನಮಂಡಲಕ್ಕೆ ಅಗೌರವ ; ಎಚ್.ಕೆ.ಪಾಟೀಲ್ ಆಕ್ರೋಶ

ಬೆಂಗಳೂರು,ಫೆ.14- ರಾಜ್ಯಪಾಲರ ನೀರಸ ಭಾಷಣದಿಂದಾಗಿ ಸಂವಿಧಾನದ ಆಶಯಗಳು ಬುಡಮೇಲಾಗಿದ್ದು, ವಿಧಾನಮಂಡಲಕ್ಕೆ ಅಗೌರವ ತೋರಿಸಿದಂತಾಗಿದೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದ ಬಗ್ಗೆ ಘನತೆ, ಗೌರವವಿದೆ. ಮುಂದಿನ ವರ್ಷ ಸರ್ಕಾರ ಕೈಗೊಳ್ಳುವ ಯೋಜನೆಗಳು, ಪ್ರಸಕ್ತ ಸಾಲಿನ ತಮ್ಮ ಸಾಧನೆಗಳ ಬಗ್ಗೆ ವಿವರಣೆ ನೀಡಬೇಕು. ಆದರೆ, ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪತ್ರಕರ್ತರಿಗೆ ಪಾಸ್ ಕೊಟ್ಟಿದ್ದೇವೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದೇವೆ ಎಂದು ಹೇಳುವಷ್ಟರ ಅಪಹಾಸ್ಯದ ಮಟ್ಟಕ್ಕೆ ರಾಜ್ಯಪಾಲರ ಭಾಷಣವನ್ನು […]