ಜಾಲಿರೈಡ್‍ಗಾಗಿ ಬೈಕ್ ಕಳವು: ಇಬ್ಬರು ಆರೋಪಿಗಳ ಸೆರೆ

ಬೆಂಗಳೂರು,ಅ.12- ಜಾಲಿರೈಡಿಗಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ 14 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 11 ಸ್ಟೈಲಿಶ್ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿನಗರ ವಾರ್ಡ್‍ನ ಪ್ರಶಾಂತ್ ಅಲಿಯಾಸ್ ಆರ್.ವಿ(25) ಮತ್ತು ಕೆ.ಆರ್.ಪುರದ ವಿಜಯ ಬ್ಯಾಂಕ್ ಕಾಲೋನಿ ನಿವಾಸಿ ಮೊಹಮ್ಮದ್ ರೋಷನ್ ಅಲಿಯಾಸ್ ರೋಷನ್(25) ಬಂಧಿತರು. ಅಕ್ಟೋಬರ್ 2ರಿಂದ 6ರವರೆಗೆ ವಿವಿಧ ಪ್ರಕರಣಗಳ ತನಿಖೆ ಕೈಗೊಂಡ ಕೊತ್ತನೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಜಾಲಿ ರೈಡ್‍ಗಾಗಿ ಸ್ಟೈಲಿಶ್ […]