ಜಮ್ಮುವಿನಲ್ಲಿ ಶಂಕಿತ ಉಗ್ರರ ಎನ್‍ಕೌಂಟರ್ ಪ್ರಕರಣ : ನ್ಯಾಯಾಂಗ ತನಿಖೆಗೆ ಆದೇಶ

ಜಮ್ಮು,ಜ.18- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿರುವ ಮಾರ್ಗಸೂಚಿ ಅನ್ವಯ ಕಳೆದ ಡಿಸೆಂಬರ್‍ನಲ್ಲಿ ಇಲ್ಲಿನ ಸಿದ್ರಾ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್ ಪ್ರಕರಣದವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಡಿಸೆಂಬರ್ 28 ರಂದು ಸಿದ್ರಾದಲ್ಲಿ ಪೊಲೀಸ್ ಚೆಕ್-ಪಾಯಿಂಟ್ ಬಳಿ ನಡೆದ ಎನ್‍ಕೌಂಟರ್‍ನಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದರು. ಪ್ರಕರಣವನ್ನು ಜಮ್ಮುವಿನ ಸಹಾಯಕ ಆಯುಕ್ತ ಪಿಯೂಷ್ ಧೋತ್ರಾ ತನಿಖೆ ನಡೆಸಲಿದ್ದಾರೆ. ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಿ ವರದಿಯನ್ನು ಜಮ್ಮುವಿನ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಸಲ್ಲಿಸಲು ಸೂಚಿಸಲಾಗಿದೆ ಎಂದರು ತನಿಖಾಧಿಕಾರಿ ತಿಳಿಸಿದ್ದಾರೆ. […]